ಎಚ್‍ಎಂಟಿ ಆಸ್ತಿ ಕಬಳಿಕೆ ಆರೋಪವಿರುವ ಕೆಲ ರಾಜಕಾರಣಿಗಳಿಗೆ ಸಿಬಿಐ ಗ್ರಿಲ್

ಈ ಸುದ್ದಿಯನ್ನು ಶೇರ್ ಮಾಡಿ

gfgdsdgsdgಬೆಂಗಳೂರು, ಆ.4– ಎಚ್.ಎಂ.ಟಿ ಕಾರ್ಖಾನೆಗೆ ಸೇರಿದ ಸಾವಿರಾರು ರೂ. ಮೌಲ್ಯದ ಭೂಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಕೆಲವು ಪ್ರತಿಷ್ಠಿತ ವ್ಯಕ್ತಿಗಳನ್ನು ಸಿಬಿಐ ಶೀಘ್ರವೇ ಖುದ್ದು ವಿಚಾರಣೆ ಆರಂಭಿಸಲಿದೆ. 631 ಎಕರೆಯಷ್ಟಿದ್ದ ಎಚ್‍ಎಂಟಿ ಕಾರ್ಖಾನೆ ಆಸ್ತಿಯನ್ನು  ಕೆಲವು ಪ್ರಭಾವಿ ರಾಜಕಾರಣಿಗಳು,ಅಧಿಕಾರಿಗಳು  ಹಾಗೂ ಬಿಲ್ಡರ್‍ಗಳು ನಕಲಿ ದಾಖಲೆ ಸೃಷ್ಟಿಸಿ ಅಂದಾಜು 5 ಸಾವಿರ ಕೋಟಿ ಮೌಲ್ಯದ 263 ಎಕರೆ ಪ್ರದೇಶವನ್ನು ಕಬಳಿಸಿದ ಆರೋಪಕ್ಕೆ ಗುರಿಯಾಗಿದ್ದರು. ಈ ಅಕ್ರಮ ಕುರಿತ ಮಹತ್ವದ ದಾಖಲೆಗಳನ್ನು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಸಿಬಿಐಗೆ ದೂರು ನೀಡಿದ್ದರು. ಸಾವಿರಾರು ಕೋಟಿ ಮೌಲ್ಯದ ಭೂ ಕಬಳಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಬಿಐ ದೂರುದಾರರಾದ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಹಾಗೂ ಎನ್.ಆರ್.ರಮೇಶ್ ಅವರಿಂದ ಅಂತಿಮ ಹೇಳಿಕೆ ಪಡೆದುಕೊಂಡು ವಿಚಾರಣೆ ನಡೆಸಿದೆ.

ಬಹುತೇಕ ವಿಚಾರಣೆ ಪೂರ್ಣಗೊಂಡಿದ್ದು, ಅಕ್ರಮದಲ್ಲಿ ಭಾಗಿಯಾಗಿರುವ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳ ಖುದ್ದು ವಿಚಾರಣೆ ನಡೆಸಲು ಸಿಬಿಐ ತೀರ್ಮಾನಿಸಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಸಿಬಿಐ ರಾಜ್ಯದ ಕೆಲ ಪ್ರಮುಖ ರಾಜಕಾರಣಿಗಳನ್ನು ವಿಚಾರಣೆಗೊಳಪಡಿಸಲಿದ್ದು, ಅಕ್ರಮದಲ್ಲಿ ಭಾಗಿಯಾಗಿರುವ ಇನ್ನಿತರ ಕೆಲವಾರು ವ್ಯಕ್ತಿಗಳ ಹೆಸರು ಬಹಿರಂಗಗೊಳ್ಳುವ ಸಾಧ್ಯತೆ ಇದೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin