ಎಚ್‍ಐವಿ ಪೀಡಿತ ಮಕ್ಕಳೊಂದಿಗೆ ಚಾಮುಂಡಿ ಬೆಟ್ಟ ಹತ್ತಿದ ಮಾಜಿ ಸಚಿವ ರಾಮದಾಸ್

ಈ ಸುದ್ದಿಯನ್ನು ಶೇರ್ ಮಾಡಿ

Ramadas-Modi

ಮೈಸೂರು, ಡಿ.1- ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ನಗರದಲ್ಲಿ ಇಂದು ಮಾಜಿ ಸಚಿವ ಎಸ್.ಕೆ.ರಾಮದಾಸ್ ಅವರು ಎಚ್‍ಐವಿ ಪೀಡಿತ ಮಕ್ಕಳೊಂದಿಗೆ ಚಾಮುಂಡಿ ಬೆಟ್ಟದ ಒಂದು ಸಾವಿರ ಮೆಟ್ಟಿಲುಗಳನ್ನು ಹತ್ತಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಎಚ್‍ಐವಿ ಪೀಡಿತರು ಮುಖಕ್ಕೆ ಪ್ರಧಾನಿ ನರೇಂದ್ರಮೋದಿಯವರ ಮುಖವಾಡ ಧರಿಸಿ ಮೋದಿಯವರಿಗೆ ಒಳ್ಳೆಯದಾಗಲಿ ಎಂದು ಘೋಷಣೆ ಕೂಗಿ ಪೂಜೆ ನೆರವೇರಿಸಿದರು. ಬಳಿಕ ನಗರದ ಕೆಆರ್ ಆಸ್ಪತ್ರೆಯ ಎಆರ್‍ಟಿ ಸೆಂಟರ್‍ನಲ್ಲಿರುವ ಎಚ್‍ಐವಿ ಪೀಡಿತರಿಗೆ ಸಿಹಿ ಹಂಚಿದರು.  ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರದೋ ತಪ್ಪಿನಿಂದ ಹಲವು ಮಕ್ಕಳು ಎಚ್‍ಐವಿ ಪೀಡಿತರಾಗಿದ್ದಾರೆ. ಅಮ್ಮ ಮನೆಯ ಕೇಂದ್ರದಲ್ಲಿರುವ ಎಚ್‍ಐವಿ ಪೀಡಿತ ಮಕ್ಕಳ ಲಾಲನೆ-ಪಾಲನೆ ಮಾಡಿ ಸೂಕ್ತ ಔಷಧಿ ನೀಡಿ ಉಪಚಾರ ಮಾಡುವುದರಿಂದ ಮಕ್ಕಳ ಆರೋಗ್ಯ ಉತ್ತಮವಾಗಲಿದೆ ಎಂದರು.

ಎಚ್‍ಐವಿ ಪೀಡಿತ ಮಕ್ಕಳು ಈ ಹಿಂದೆ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಲು ತುಂಬ ಆಯಾಸ ಪಡುತ್ತಿದ್ದರು. ಆದರೆ, ಈ ಬಾರಿ ಮಕ್ಕಳು ಮೆಟ್ಟಿಲುಗಳನ್ನು ಆಯಾಸವಿಲ್ಲದೆ ಹುಮ್ಮಸ್ಸಿನಿಂದ ಹತ್ತಿದ್ದು, ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದರು. ಮುಂಬರುವ ದಿನಗಳಲ್ಲಿ ಎಚ್‍ಐವಿ ಪೀಡಿತರು ಸಮಾಜದ ಮುಖ್ಯ ವಾಹಿನಿಗೆ ಕರೆತಂದು ಎಲ್ಲರಂತೆ ಬದುಕುವಂತಾಗಬೇಕು ಎಂದು ಅವರು ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin