ಎಚ್‍ಡಿಕೆ ಮತ್ತೆ ಸಿಎಂ ಆಗಿದ್ದಕ್ಕೆ 1001 ಮೆಟ್ಟಿಲೇರಿ ಹರಕೆ ತೀರಿಸಿದ ವಿಕಲಚೇತನ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಮೈಸೂರು, ಮೇ 27-ವಿಶೇಷ ಚೇತನ ಮಹಿಳೆಯೊಬ್ಬರು ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವುದಕ್ಕೆ ಚಾಮುಂಡಿ ಬೆಟ್ಟವನ್ನು ಬರಿಗಾಲಿನಲ್ಲಿ ಹತ್ತಿ ಹರಕೆ ತೀರಿಸಿದರು. ಗುಲ್ಬರ್ಗ ಮೂಲದ ಸಂಗೀತ ಎಂಬುವರು ಇಂದು ಬೆಳಗ್ಗೆ ಮೈಸೂರಿಗೆ ಆಗಮಿಸಿ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಪೂಜೆ ಸಲ್ಲಿಸಿ ಬರಿಗಾಲಿನಲ್ಲಿ 1001 ಮೆಟ್ಟಿಲು ಹತ್ತಿ ಹರಕೆ ತೀರಿಸಿದರು.  2006ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಸಂಗೀತಾ ಅವರಿಗೆ ವಿಕಲಚೇನರ ಕೋಟಾದಲ್ಲಿ ಉದ್ಯೋಗ ಕೊಡಿಸಿದ್ದರು. ಮತ್ತೆ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ಚಾಮುಂಡಿ ಬೆಟ್ಟವನ್ನು ಬರಿಗಾಲಿನಲ್ಲಿ ಹತ್ತುವುದಾಗಿ ಹರಕೆ ಹೊತ್ತಿದ್ದರಂತೆ. ಸಂಗೀತಾ ಅವರ ಪತಿ ಶಿವಾರೆಡ್ಡಿ ಹಾಗೂ ಕುಟುಂಬದವರು ಬೆಟ್ಟ ಹತ್ತಲು ನೆರವಾದರು. ಸಂಗೀತಾ ಅವರಿಗೆ ಒಂದು ಕಾಲು ಸರಿಯಿಲ್ಲ. ನಡೆಯುವುದು ಕಷ್ಟವಾದರೂ ಛಲ ಬಿಡದೆ 1001 ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.

Facebook Comments

Sri Raghav

Admin