ಎಚ್‍ಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿ : ನೆಚ್ಚಿನ ನಾಯಕನ ಆರೋಗ್ಯಕ್ಕಾಗಿ ಅಭಿಮಾನಿಗಳ ಪ್ರಾರ್ಥನೆ

ಈ ಸುದ್ದಿಯನ್ನು ಶೇರ್ ಮಾಡಿ

hdk-1

ಬೆಂಗಳೂರು, ಸೆ.23- ನಗರದ ಖಾಸಗಿ ಆಸ್ಪತ್ರೆಯಲ್ಲಿ ಡಾ.ಸತ್ಯಕಿ ನೇತೃತ್ವದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಟಿಶ್ಯು ವಾಲ್ವ್ ರೀಪ್ಲೇಸ್‍ಮೆಂಟ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಶಸ್ತ್ರ ಚಿಕಿತ್ಸೆಗಾಗಿ ಕುಮಾರಸ್ವಾಮಿ ಅವರು ಕಳೆದ ಶುಕ್ರವಾರ ಸಂಜೆ ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು , ನಿನ್ನೆ ಚಿಕಿತ್ಸಾ ಪೂರ್ವ ಆರೋಗ್ಯ ಪರೀಕ್ಷೆ ನೆಡಸಲಾಗಿತ್ತು.  ಇಂದು ಮುಂಜಾನೆ 7.30ಕ್ಕೆ ಡಾ.ಸತ್ಯಕಿ ನೇತೃತ್ವದ ವೈದ್ಯರ ತಂಡ ಆಪರೇಷನ್ ಆರಂಭಿಸಿ 8.15ಕ್ಕೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದರು.

WhatsApp Image 2017-09-23 at 10.08.56 AM

ಎಚ್‍ಡಿಕೆ ಅವರನ್ನು ಆಪರೇಷನ್ ನಂತರ ಮೂರು ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು , 12 ಗಂಟೆ ನಂತರ ಅವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಬಂದಿತು.  ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದ ಆಸ್ಪತ್ರೆಯಲ್ಲಿ ಜೆಡಿಎಸ್ ವಕ್ತಾರ ಶಿವರಾಮೇಗೌಡ, ಶಾಸಕ ಸಾ.ರಾ.ಮಹೇಶ್, ಮೈಸೂರು ಮೇಯರ್ ರವಿಕುಮಾರ್, ಎಚ್.ಡಿ.ಕೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಕುಮಾರಸ್ವಾಮಿ ಸಹೋದರಿ ಶೈಲಜಾ ಮತ್ತಿತರ ಕುಟುಂಬಸ್ಥರು ಹಾಗೂ ನೂರಾರು ಅಭಿಮಾನಿಗಳು ಹಾಜರಿದ್ದರು.

WhatsApp Image 2017-09-23 at 10.39.46 AM(1)

ಎಚ್‍ಡಿಕೆಗೆ ಆರೋಗ್ಯಕ್ಕೆ ಅಭಿಮಾನಿಗಳ ಪ್ರಾರ್ಥನೆ  : 

ಮೈಸೂರು/ಬೆಂಗಳೂರು,ಸೆ.23-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ ಎಂದು ಹಾರೈಸಿ ರಾಜ್ಯಾದ್ಯಂತ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.  ಚಾಮರಾಜ ಕ್ಷೇತ್ರದದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ನೇತೃತ್ವದಲ್ಲಿ ನೂರಾರು ಮುಖಂಡರು, ಕಾರ್ಯಕರ್ತರು ಅರಮನೆ ಸಮೀಪದ ಗಣಪತಿ ಮತ್ತು ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಮಾರಸ್ವಾಮಿಯವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.

ಮಾಜಿ ಮೇಯರ್ ಲಿಂಗಪ್ಪ , ಕಾರ್ಪೊರೇಟರ್  ಎಸ್.ಬಿ.ಎಂ.ಮಂಜು ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಬಿಬಿಎಂಪಿ ಸದಸ್ಯ ಹಾಗೂ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಭದ್ರೇಗೌಡ ಅವರು ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.  ಗವಿಗಂಗಾಧರೇಶ್ವರ ದೇವಾಲಯದಲ್ಲಿ ಕುಮಾರಸ್ವಾಮಿ ಅಭಿಮಾನಿಗಳು ಗವಿ ಗಂಗಾಧರನಿಗೆ 108 ಕೊಡ ಹಾಲಿನ ಅಭಿಷೇಕ ನಡೆಸಿ ಮೃತ್ಯುಂಜಯ ಹೋಮ ಮತ್ತು 10,008 ಮಹಾರುದ್ರ ಪಾರಾಯಣ ನಡೆಸಿದರು. ಗವಿಗಂಗಾಧರಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಮ-ಹವನದಲ್ಲಿ ಸ್ವತಃ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪಾಲ್ಗೊಂಡಿದ್ದರು.

WhatsApp Image 2017-09-23 at 10.08.55 AM

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin