ಎಚ್.ಡಿ.ಕುಮಾರಸ್ವಾಮಿ ವಿರುದ್ಧ 200 ಎಕರೆ ಭೂ ಕಬಳಿಕೆ ಆರೋಪ ಮಾಡಿದ ಹಿರೇಮಠ್

ಈ ಸುದ್ದಿಯನ್ನು ಶೇರ್ ಮಾಡಿ

S.R.Hiremutt

ಹುಬ್ಬಳ್ಳಿ ಅ.30 : ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಬಡವರಿಗೆ ಸೇರಿದ ಭೂಕಬಳಿಕೆ ಮಾಡಿದ ಗಂಭೀರ ಆರೋಪನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರೇಮಠ್ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಆದಿ ಕರ್ನಾಟಕ ಜನಾಂಗದ ಬಡವರಿಗೆ ಹಂಚಿಕೆಯಾಗಿದ್ದ 200 ಎಕರೆ ಭೂಮಿಯನ್ನು ಕುಮಾರಸ್ವಾಮಿ ಕಬಳಿಸಿದ್ದಾರೆ ಎಂದು ಹಿರೇಮಠ್ ಆರೋಪಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 200 ಎಕರೆ ಭೂಕಬಳಿಕೆಯಾಗಿದ್ದು, ಇದರಲ್ಲಿ 100 ಎಕರೆ ಜಾಗವು ಗೋಮಾಳಕ್ಕೆ ಸಂಬಂಧಿಸಿದ ಜಾಗವಾಗಿದೆ. ಈ ಜಾಗವನ್ನು ಹೆಚ್’ಡಿಕೆ ಹಾಗೂ ಹತ್ತಿರದ ಸಂಬಂಧಿ ಮದ್ದೂರು ಶಾಸಕ ಬಿ.ಸಿ.ತಮ್ಮಣ ಎಂಬುವರು ಅತಿಕ್ರಮಣ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

1987 ರಿಂದ ಕಬಳಿಕೆ ನಡೆಸಲಾಗುತ್ತಿದ್ದು, ಇದಕ್ಕೆ ಅಂದು ಸಚಿವರಾಗಿದ್ದ ದೇವೇಗೌಡರೂ ಸಹಕಾರ ನೀಡಿದ್ದರು. ಇದರ ಲಾಭವನ್ನು ಕುಮಾರಸ್ವಾಮಿ ಅವರ ಸಂಬಂಧಿ ಡಿ.ಸಿ.ತಮ್ಮಣ್ಣ ಅವರು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರಕಾರ ಕೂಡಲೇ ಈ ಸಂಬಂಧ ತನಿಖೆ ನಡೆಸಿ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ಕಬಳಿಕೆಯಾದ ಭೂಮಿಯನ್ನು ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಬಡವರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಜಿ.ಮಾದೆಗೌಡ ಈ ಬಗ್ಗೆ 2013ರಲ್ಲಿ ದಾಖಲೆ ಸಮೇತ ದೂರು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗು ತಹಶೀಲ್ದಾರರಿಗೆ ದೂರು ನೀಡಲಾಗಿದೆ. ರಾಮನಗರ ಉಪವಿಭಾಗಧಿಕಾರಿಯು ಈ ಭೂಕಬಳಿಕೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿಯನ್ನು ಎಸ್ ಆರ್ ಹಿರೇಮಠ ಇಂದು ಪತ್ರಿಕಾಗೊಷ್ಠಿಯಲ್ಲಿ ಹೊರಹಾಕಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.