ಎಚ್-1ಬಿ ವೀಸಾ : ಆದೇಶಕ್ಕೆ ಟ್ರಂಪ್ ಸಹಿ, ಭಾರತೀಯರಿಗೆ ಕಂಟಕ..!

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಏ.19-ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಉದ್ಯೋಗ ಭದ್ರತೆಗೆ ಆತಂಕ ತಂದೊಡ್ಡಿರುವ ಎಚ್-1ಬಿ ವೀಸಾ ಪರಾಮರ್ಶೆಗೆ ಅವಕಾಶ ನೀಡುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ. ಅಮೆರಿಕನ್ನರ ಉದ್ಯೋಗವನ್ನು ಮುಖ್ಯವಾಗಿ ಭಾರತೀಯರು ಕಸಿಯಬಾರದೆಂಬ ಉದ್ದೇಶವನ್ನು ಈ ಆದೇಶ ಒಳಗೊಂಡಿದೆ.  ಈ ಮಹತ್ವದ ಆದೇಶಕ್ಕೆ ಸಹಿ ಮಾಡಿದ ನಂತರ ಮಾತನಾಡಿದ ಟ್ರಂಪ್, ನಮ್ಮ ವಲಸೆ ನೀತಿಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿದೆ.

ಇತರ ದೇಶಗಳಿಂದ ವಲಸೆ ಬಂದ ಉದ್ಯೋಗಿಗಳ ಬದಲಿಗೆ ಕುಶಲತೆ ಹೊಂದಿರುವ ನಮ್ಮವರಿಗೆ ಆ ನೌಕರಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.  ಇದರೊಂದಿಗೆ ಭಾರತೀಯ ಉದ್ಯೋಗಿಗಳ ನೌಕರಿಗೆ ಕುತ್ತುಂಟುಗಲಿದ್ದು, ಅತ್ಯಧಿಕ ವೇತನದ ಹುದ್ದೆಗಳು ಇನ್ನು ಮುಂದೆ ಅಮೆರಿಕನ್ನರ ಪಾಲಾಗಲಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin