ಎಚ್-1ಬಿ ವೀಸಾ ದುರ್ಬಳಕೆ ತಡೆಗಟ್ಟಲು ಬ್ರಹ್ಮಾಸ್ತ್ರ ಪ್ರಯೋಗಿಸಿದ ಟ್ರಂಪ್ ಆಡಳಿತ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಏ.4- ಭಾರತೀಯರೂ ಸೇರಿದಂತೆ ವಿವಿಧ ದೇಶಗಳ ಲಕ್ಷಾಂತರ ಕುಶಲ ಉದ್ಯೋಗಿಗಳು ಅಮೆರಿಕದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಎಚ್-1ಬಿ ವೀಸಾ ದುರುಪಯೋಗ ತಡೆಗಟ್ಟಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಇಂದಿನಿಂದ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಅಲ್ಲದೆ, ಕಟ್ಟುನಿಟ್ಟಿನ ನಿಯಮಗಳನ್ನೂ ಜಾರಿಗೊಳಿಸಿ ಪ್ರತಿಭಾವಂತ ಉದ್ಯೋಗಿಗಳ ಗಾಯದ ಮೇಲೆ ಬರೆ ಎಳೆದಿದೆ.   ಅಲ್ಲದೇ, ಸರಳ ಕಂಪ್ಯೂಟರ್ ಆಪರೇಟರ್‍ಗಳು ಇನ್ನು ಮುಂದೆ ಅಮೆರಿಕದಲ್ಲಿ ಅಧಿಕ ಸಂಬಳದ ವಿಶೇಷ ಕಂಪ್ಯೂಟರ್ ಪರಿಣಿತ ಹುದ್ದೆಯನ್ನು ಅನುಭವಿಸುವ ಸೌಲಭ್ಯಕ್ಕೂ ಕಡಿವಾಣ ಹಾಕಲಾಗಿದೆ.

ಅತಿಥಿ ಉದ್ಯೋಗಿಗಳ ವೀಸಾ ನೀಡಿಕೆಯಲ್ಲಿ ಸಮಸ್ಯೆ ಉಂಟಾಗಿದೆ ಎಂಬುದನ್ನು ಖಚಿತಪಡಿಸಿರುವ ಶ್ವೇತಭವನ, ಎಚ್-1ಬಿ ಉದ್ಯೋಗ ವೀಸಾಗಾಗಿ ಅರ್ಜಿ ಸಲ್ಲಿಸುವ ಉದ್ಯೋಗಿಗಳು ಮತ್ತು ಈಗಾಗಲೇ ವೀಸಾ ಪಡೆದಿರುವವರು ಅಮೆರಿಕ ನೌಕರರ ವಿರುದ್ಧ ತಾರತಮ್ಯದ ಆರೋಪ ಮಾಡದಂತೆ ಎಚ್ಚರಿಕೆ ನೀಡಿದೆ.
ಈ ಹಿಂದೆ ಆಡಳಿತದಲ್ಲಿದ್ದ ಬರಾಕ್ ಓಬಾಮಾ ಸರ್ಕಾರವು ಈ ವಿಷಯದಲ್ಲಿ ಸಡಿಲ ನೀತಿ ಅನುಸರಿಸಿತ್ತು ಎಂದು ಟ್ರಂಪ್ ಆಡಳಿತ ಆರೋಪಿಸಿದೆ.

ಅಮೆರಿಕ ಉದ್ಯೋಗಿಗಳಿಗೆ ಸಮಸ್ಯೆ ತಂದೊಡ್ಡುವ ಎಚ್-1ಬಿ ವೀಸಾ ಪ್ರಕ್ರಿಯೆಯನ್ನು ನೌಕರರು ದುರುಪಯೋಗ ಮಾಡಿಕೊಳ್ಳುವುದನ್ನು ನ್ಯಾಯಾಂಗ ಇಲಾಖೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಾಗರಿಕ ಹಕ್ಕುಗಳ ವಿಭಾಗದ ಉಸ್ತುವಾರಿ ಸಹಾಯಕ ಅಟಾರ್ನಿ ಜನರಲ್ ಟಾಮ್ ವೀಲರ್ ಹೇಳಿದ್ದಾರೆ.
ಅಮೆರಿಕದಲ್ಲಿ ಉದ್ಯೋಗ ಅರಸಿ ಬರುವ ಸಾಗರೋತ್ತರ ಉದ್ಯೋಗಿಗಳು ವೀಸಾ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ತಾಯ್ನಾಡಿನ ಲಕ್ಷಾಂತರ ನೌಕರರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಕಾನೂನು ಕಡಿವಾಣ ಹಾಕಲು ಕೆಲವೊಂದು ನಿಯಮಗಳನ್ನು ಬದಲಾವಣೆ ಮಾಡಬೇಕಾದುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.

ಸಿಂಪಲ್ ಕಂಪ್ಯೂಟರ್ ಆಪರೇಟರ್‍ಗಳಿಗೆ ಕಗ್ಗಂಟು :

ಸರಳ ಕಂಪ್ಯೂಟರ್ ಆಪರೇಟರ್‍ಗಳು ಇನ್ನು ಮುಂದೆ ಅಮೆರಿಕದಲ್ಲಿ ಉತ್ತಮ ವೇತನದ ವಿಶೇಷ ಕಂಪ್ಯೂಟರ್ ಪರಿಣಿತ ಹುದ್ದೆಯನ್ನು ಅನುಭವಿಸುವ ಸೌಲಭ್ಯಕ್ಕೂ ಕಡಿವಾಣ ಹಾಕಲಾಗಿದೆ. ಎಚ್-1ಬಿ ಉದ್ಯೋಗ ವೀಸಾ ಹೊಂದಲು ಕಂಪ್ಯೂಟರ್‍ನಲ್ಲಿ (ವಿಶೇಷವಾಗಿ ಸಾಫ್ಟ್‍ವೇರ್) ಪರಿಣಿತಿ ಪಡೆದಿರುಬೇಕೆಂಬುದು ನಿಯಮ. ಆದರೆ ಅನೇಕ ಮಂದಿ ಸರಳ ಕಂಪ್ಯೂಟರ್ ಪ್ರೋಗ್ರಾಮರ್‍ಗಳಾಗಿದ್ದುಕೊಂಡು ಈ ವೀಸಾ ಪಡೆದು ಅಮೆರಿಕದಲ್ಲಿ ಕೆಲಸ ಗಿಟ್ಟಿಸಿದ್ದಾರೆ. ಇನ್ನು ಮುಂದೆ ಹೊಸ ನಿಯಮದಲ್ಲಿ ಇಂಥ ಕಂಪ್ಯೂಟರ್ ಪ್ರೋಗ್ರಾಮರ್‍ಗಳ ನೌಕರಿಗೆ ಕುತ್ತುಂಟಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin