ಎಚ್-1ಬಿ ವೀಸಾ ಬಗ್ಗೆ ಭಾರತೀಯರ ಆತಂಕ ನಿವಾರಿಸಲು ಮುಂದಾದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಮಾ.4- ವಲಸೆ ಉದ್ಯೋಗಿಗಳಿಗೆ ಕಡಿವಾಣ ಹಾಕಲು ಉದ್ದೇಶಿಸಲಾಗಿರುವ ಎಚ್-1ಬಿ ವೀಸಾ ಬಗ್ಗೆ ಭಾರತೀಯರಲ್ಲಿ ಮನೆ ಮಾಡಿರುವ ಆತಂಕ ನಿವಾರಿಸಲು ಅಮೆರಿಕ ಮುಂದಾಗಿದೆ. ಈ ವಿಷಯವು ತನಗೆ ಆದ್ಯತೆಯ ವಿಚಾರವಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಲಿರುವ ವಲಸೆ ಸುಧಾರಣೆಗಳ ಪ್ಯಾಕೇಜ್‍ನಲ್ಲಿ ಒಂದು ಭಾಗವಾಗಿರುತ್ತದೆ ಅಷ್ಟೆ ಎಂದು ಅಮೆರಿಕ ಭಾರತಕ್ಕೆ ಆಶ್ವಾಸನೆ ನೀಡಿದೆ. ಈ ವೀಸಾ ಕುರಿತು ತೀವ್ರ ಚರ್ಚೆಗಳು ನಡೆದಿರುವಾಗಲೇ ಹಾಗೂ ಇದರ ಬಳಕೆಯನ್ನು ಕಡಿತಗೊಳಿಸಿ ಭಾರತೀಯ ಉದ್ಯೋಗಿಗಳನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಲಾಗುತ್ತದೆ ಎಂಬ ಆತಂಕದ ನಡುವೆ ಅಮೆರಿಕದಿಂದ ಈ ಭರವಸೆ ವ್ಯಕ್ತವಾಗಿದೆ.

ತಂತ್ರಜ್ಞಾನ ಕ್ಷೇತ್ರಕ್ಕೆ ಭಾರತೀಯರು ನೀಡಿರುವ ಗಮನಾರ್ಹ ಕೊಡುಗೆಯನ್ನು ಅಮೆರಿಕ ಗುರುತಿಸುತ್ತದೆ. ಎಚ್-1ಬಿ ವೀಸಾದ ಕಟ್ಟುನಿಟ್ಟಿನ ಜಾರಿ ಟ್ರಂಪ್ ಸರ್ಕಾರಕ್ಕೆ ಆದ್ಯತೆಯ ವಿಷಯವಲ್ಲ. ಹೊಸ ವಲಸೆ ನೀತಿಗೆ ಆದ್ಯತೆ ನೀಡಲಾಗುತ್ತಿದೆ. ಇದರಲ್ಲಿ ವೀಸಾ ಸುಧಾರಣೆ ವಿಷಯವು ಒಂದು ಭಾಗವಾಗಿರುತ್ತದೆ ಎಂದು ವಾಣಿಜ್ಯ ಇಲಾಖೆ ಮುಖ್ಯಸ್ಥೆ ರೀಟಾ ರಿಟೋಟಿಯಾ ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin