ಎಟಿಎಂನಲ್ಲೂ ಫಿಜ್ಜಾ ಲಭ್ಯ : ವಿಶ್ವದಲ್ಲೇ ಮೊದಲ ಬಾರಿಗೆ ವಿಭಿನ್ನ ಪ್ರಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Pizza

ವಾಷಿಂಗ್ಟನ್, ಆ.9– ಅಮೆರಿಕದಲ್ಲಿನ್ನು ಇಷ್ಟವಾದ ತರಹೇವಾರಿ ಪಿಜ್ಜಾವನ್ನು ಎಟಿಎಂನಲ್ಲೂ ಪಡೆಯಬಹುದು. ವಿಶ್ವದಲ್ಲೇ ಮೊದಲ ಬಾರಿಗೆ ಇಂತಹ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ಅಮೆರಿಕದ ಒಹಿಯೊದಲ್ಲಿರುವ ಕ್ಸೇವಿಯರ್ ವಿವಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗಾಗಿ ವಿಶೇಷ ಪಿಜ್ಜಾ ಎಟಿಎಂ ಸೌಲಭ್ಯ ನೀಡಿದೆ.  24 ಗಂಟೆ ನಿರಂತರವಾಗಿ ಪಿಜ್ಜಾ ತಯಾರಿಸುವ ಮೆಷಿನ್ ಒಂದೇ ಬಾರಿ 12 ಇಂಚಿನ 70 ಪಿಜ್ಜಾಗಳನ್ನು ಕೇವಲ ಮೂರು ನಿಮಿಷದಲ್ಲಿ ತಯಾರಿಸುತ್ತದೆ. ಮೆಷಿನ್ ಪರದೆ ಮೇಲೆ ಕಾಣಿಸುವ ವಿವಿಧ ಪಿಜ್ಜಾಗಳಲ್ಲಿ ತಮಗೆ ಇಷ್ಟವಾದ ಪಿಜ್ಜಾವನ್ನು ಸ್ಪರ್ಶಿಸುವ ಮೂಲಕ ಆಯ್ಕೆ ಮಾಡಿ ಖರೀದಿಸಬೇಕು.

ಒಂದು ಪಿಜ್ಜಾಬೆಲೆ 100 ಅಮೆರಿಕನ್ ಡಾಲರ್ (. 6678.55) ಆಗಿದ್ದು, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಢ್ ಹಾಗೂ ವಿದ್ಯಾರ್ಥಿ ಕಾರ್ಡ್‍ಗಳನ್ನು ಎಟಿಎಂ ಸ್ವೀಕರಿಸುತ್ತದೆ.ಪಿಜ್ಜಾ ರುಚಿ ಅತ್ಯುತ್ತಮವಾಗಿದೆ. ಇಷ್ಟು ರುಚಿಕರ ಫಿಜÁ್ಜವನ್ನು ನಾನು ಎಲ್ಲಿಯೂ ತಿಂದಿಲ್ಲ ಎನ್ನುತ್ತಾರೆ ವಿವಿ ಸಿಬ್ಬಂದಿ.  ಉತ್ತಮವಾದ, ಆರೋಗ್ಯಕರ, ನಂಬಲರ್ಹವಾದ ಪಿಜ್ಜಾವನ್ನು ಮೆಷಿನ್ ತಯಾರಿಸುತ್ತದೆ. ಯಾವ ಆಹಾರ ಪದಾರ್ಥವನ್ನೂ ಸಹ ಮೆಷಿನ್ ಮುಟ್ಟುವುದಿಲ್ಲ ಎಂದು ಮೆಷಿನ್‍ಅನ್ನು ಕಂಡುಹಿಡಿದ ಫ್ರೆಂಚ್ ಮೂಲದ ಕಂಪೆನಿ ಹೇಳಿದೆ.

 

Facebook Comments

Sri Raghav

Admin