ಎಡಪ್ಪಾಡಿಯಿಂದ ತಮಿಳುನಾಡಿನ ಸಿಎಂ ಹುದ್ದೆವರೆಗೂ ಪಳನಿಸ್ವಾಮಿಯ ರಾಜಕೀಯ ಪಯಣ ಹೇಗಿತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

Palanisamy--01

ಚೆನ್ನೈ, ಫೆ.16-ಎಡಪ್ಪಾಡಿಯಿಂದ ಮುಖ್ಯಮಂತ್ರಿ ಸ್ಥಾನದವರೆಗೂ ಕೆ.ಪಳನಿಸ್ವಾಮಿ ಅವರ ರಾಜಕೀಯ ಪಯಣ ಸ್ವಾರಸ್ಯಕರ… ತಮಿಳುನಾಡಿನ ಸೇಲಂ ಜಿಲ್ಲೆಯ ಎಡಪ್ಪಾಡಿಯಲ್ಲಿ ಜನಿಸಿದ ಗೌಂಡರ್ ಸಮುದಾಯದ ಪಳನಿಸ್ವಾಮಿ, ತಮ್ಮ ನಾಯಕತ್ವ ಗುಣದಿಂದಾಗಿ ನಾಲ್ಕು ಬಾರಿ (1989, 1991, 2011 ಮತ್ತು 2016) ವಿಧಾನಸಭೆಗೆ ಆಯ್ಕೆಯಾದರು.  ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳು, ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇವರದು.  ಜಯಲಲಿತಾ ನಿಧನಾನಂತರ ಪನ್ನೀರ್‍ಸೆಲ್ವಂ ಮುಖ್ಯಮಂತ್ರಿಯಾದಾಗ, ಶಶಿಕಲಾ ಅವರೇ ಮುಂದಿನ ಸಿಎಂ ಆಗಬೇಕು ಎಂದು ಸಾರ್ವಜನಿಕ ಹೇಳಿಕೆ ನೀಡಿ ಗಮನ ಸೆಳೆದಿದ್ದರು. [ ತಮಿಳುನಾಡಿನ 21ನೇ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಪ್ರಮಾಣ]

1987ರಲ್ಲಿ ಪಕ್ಷದ ಸಂಸ್ಥಾಪಕ ಎಂಜಿಆರ್ ನಿಧನಾನಂತರ ಎಐಎಡಿಎಂಕೆ ಇಬ್ಭಾಗವಾದಾಗ ಜಯಲಲಿತಾರಿಗೆ ಬೆಂಬಲ ನೀಡಿ ಪಕ್ಷವನ್ನು ಪುನರ್ ಸಂಘಟಿಸಲು ಪಳನಿಸ್ವಾಮಿ ನೆರವಾಗಿದ್ದರು.
ಜಯಾ ಸಂಪುಟದಲ್ಲಿ ಪನ್ನೀರ್, ನಾಥಮ್ ಆರ್.ವಿಶ್ವನಾಥನ್ ಹಾಗೂ ಆರ್.ವೈದ್ಯಲಿಂಗಂ ನಂತರ ಇವರು ಅತ್ಯಂತ ಪ್ರಭಾವಿ ಸಚಿವರಾಗಿದ್ದರು.  ಜಯಾರ ಪರಮಾಪ್ತರಲ್ಲಿ ಪಳನಿಸ್ವಾಮಿ ಮುಂಚೂಣಿಯಲ್ಲಿದ್ದರು. ಅಲ್ಲದೆ ಪಕ್ಷದ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿದ್ದರು.  ತಮ್ಮ ವಿರುದ್ಧ ದಿನಪತ್ರಿಕೆಯಲ್ಲಿ ಭ್ರಷ್ಟಾಚಾರ ಆರೋಪ ಮಾಡಿದ್ದ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇವಿಕೆಎಸ್ ಇಳುಗೋವನ್ ವಿರುದ್ಧ 2013ರಲ್ಲಿ ಪಳನಿಸ್ವಾಮಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.  ಜಯಲಲಿತಾ ನಿಧನಾನಂತರ ಶಶಿಕಲಾರಿಗೆ ಪರಮ ನಿಷ್ಠರಾಗಿದ್ದ ಪಳನಿ ಈಗ ಮುಖ್ಯಮಂತ್ರಿಯಾಗುವ ಮೂಲಕ ಚಿನ್ನಮ್ಮ ಆಸೆಯನ್ನು ನೆರವೇರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin