ಎತ್ತಿನಗಾಡಿಗೆ ಬಸ್ ಡಿಕ್ಕಿ : ಇಬ್ಬರ ಸಾವು
ಈ ಸುದ್ದಿಯನ್ನು ಶೇರ್ ಮಾಡಿ
ಮದ್ದೂರು,ಸೆ.21-ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಮದ್ದೂರು ತಾಲ್ಲೂಕಿನ ನಿಡಘಟ್ಟ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಮದ್ದೂರಿನವರೇ ಆದ ಪುಟ್ಟಸ್ವಾಮಿ(41) ಹಾಗೂ ಚಂದ್ರ(35) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಹೊಲಕ್ಕೆ ಹೋಗಲು ಎತ್ತಿನಗಾಡಿಯಲ್ಲಿ ತೆರಳುವಾಗ ಮೈಸೂರು ಕಡೆಗೆ ಹೋಗುತ್ತಿದ್ದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ರಸ್ತೆಬದಿ ಉರುಳಿದ ಬಂಡಿಯಡಿ ಸಿಲುಕಿ ಇಬ್ಬರು ಗಂಭೀರವಾಗಿ ಗಾಯ ಗೊಂಡು ಮೃತಪಟ್ಟರೆ ಎತ್ತುಗಳು ಸಹ ಗಂಭೀರವಾಗಿ ಗಾಯಗೊಂಡಿವೆ. ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
► Follow us on – Facebook / Twitter / Google+
Facebook Comments