ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಿ : ಕೋಡಿಹಳ್ಳಿ ಚಂದ್ರಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

kodihalli-chandrashekar

ಚಿಕ್ಕಬಳ್ಳಾಪುರ, ಏ 26-ರಾಜ್ಯದ ಜನತೆ ಕಾಂಗ್ರೆಸ್‍ಗೆ ಅಧಿಕಾರ ನೀಡಿದ್ದಾರೆ, ಇನ್ನು ಉಳಿದ ಕಡಿಮೆ ಅವಧಿಯಲ್ಲಾದರೂ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಿ ಬಯಲುಸೀಮೆಯ ಈ ಭಾಗಕ್ಕೆ ಶಾಶ್ವತ ನೀರಾವರಿ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದು ರೈತಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯ? ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಮೂರ್ಖರನ್ನು ವಿಧಾನಸಭೆಗೆ ಕಳುಹಿಸುತ್ತಿರುವ ಕಾರಣ ರೈತರ ಸಮಸ್ಯೆಗಳ ಕುರಿತು ಮಾತನಾಡುವ ವ್ಯಕ್ತಿಯೇ ಇಲ್ಲವಾಗಿದ್ದಾರೆ, ಆದರೆ ಸಮಸ್ಯೆ ಇರುವ ವ್ಯಕ್ತಿಯೇ ಸದನಕ್ಕೆ ಪ್ರವೇಶ ಮಾಡಿದರೆ ಸರ್ಕಾರದ ಮೇಲೆ ಒತ್ತಡ ಹೇರಿ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ.

ಹಾಗಾಗಿಯೇ ರೈತಸಂಘ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇ 35 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ ಎಂದ ಅವರು ಪ್ರಸ್ತುತ ಬಯಲು ಸೀಮೆ ಪ್ರದೇಶದಲ್ಲಿರುವ ಜನಪ್ರತಿನಿಧಿಗಳು ನೀರಾವರಿ ಹರಿಸುವ ಸಂಬಂಧ ಬದ್ಧತೆ ಕಳೆದುಕೊಂಡಿದ್ದು ನೀರಾವರಿ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ ಎಂದರು.ಈ ಭಾಗದ ಏಕೈಕ ಜೀವಾಳವಾಗಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಎಂಟು ಪಿಕಪ್ ಡ್ಯಾಂಗಳಲ್ಲಿ ಇನ್ನೂ ಕೇವಲ ಎರಡರ ಕಾಮಗಾರಿ ಮಾತ್ರ ಆರಂಭವಾಗಿದೆ. ಉಳಿದ ಕಾಮಗಾರಿ ಮಾಡಲು ಅಲ್ಲಿನ ರೈತರಿಂದ ವಶಪಡಿಸಿಕೊಂಡಿರುವ ಭೂಮಿಗೆ ಇನ್ನೂ ಪರಿಹಾರ ಒದಗಿಸಿಲ್ಲ, ಇಷ್ಟೆಲ್ಲ ಸಮಸ್ಯೆಗಳ ನಡುವೆ ಕಾಮಗಾರಿ ಶೀಘ್ರ ಮುಗಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಶಾಶ್ವತ ನೀರಾವರಿಗೆ ಆಗ್ರಹಿಸಿ ಬಯಲು ಸೀಮೆ ಭಾಗದ ರೈತರಿಂದ ಬೆಂಗಳೂರಿಗೆ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ ವೇಳೆ ಸಿಎಂ ಸಿದ್ದರಾಮಯ್ಯ ನೀಡದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ತಾಂತ್ರಿಕ ಸಮಿತಿ ರಚನೆ, ತಜ್ಞರ ಸಮಿತಿ ರಚನೆ ಜೊತೆಗೆ ಎತ್ತಿನಹೊಳೆ ಹೊರತುಪಡಿಸಿ ಇತರೆ ಮೂಲಗಳಿಂದ ಈ ಭಾಗಕ್ಕೆ ನೀರು ನೀಡುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣಾ ನೀರಿನಲ್ಲಿ ನಮ್ಮ ರಾಜ್ಯದ ಪಾಲಿನ ನೀರು ಸಂಪೂರ್ಣ ಬಳಸಿಕೊಳ್ಳುವಲ್ಲಿ ವಿಫವಾಗಿರುವ ಸರ್ಕಾರ ನಮ್ಮ ಪಾಲಿನ ನೀರನ್ನೂ ಆಂಧ್ರಕ್ಕೆ ಬಿಟ್ಟು ಕೈಕಟ್ಟಿ ಕುಳಿತಿದೆ.

ಶರಾವತಿ ಹಿನ್ನೀರಿನ ವಿಚಾರದಲ್ಲಿಯೂ ಇದೇ ಧೋರಣೆ ಮುಂದುವರೆದಿದೆ. ಚುನಾವಣೆಗೆ ಮೊದಲು ಒಂದು ಅಡಿಗಲ್ಲು, ಚುನಾವಣೆ ಮುಕ್ತಾಯದ ವೇಳೆ ಒಂದು ಅಡಿಗಲ್ಲು ಹಾಕುವ ಜಾಯಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರೂಡಿಸಿಕೊಂಡಿರುವುದು ವಿಪರ್ಯಾಸ ಎಂದರು.ಪತ್ರಿಕಾಗೋಷ್ಠಿಯಲ್ಲಿ ರೈತಸಂಘದ, ರಾಜ್ಯ ಕಾರ್ಯದರ್ಶಿ ಶಿವಪ್ಪ, ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕಾರ್ಯದರ್ಶಿ ಮಂಡಿಕಲ್ಲು ವೇಣು, ಬೆಂಗಳೂರು ನಗರಘಟಕದ ಅಧ್ಯ? ನಾಗರಾಜು, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ರಾಮಂಜಿನಪ್ಪ, ಶಿಡ್ಲಘಟ್ಟಬ ಮಂಜುನಾಥ್, ಬಾಗೇಪಲ್ಲಿಯ ಲಕ್ಷ್ಮಣರೆಡ್ಡಿ, ಗೌರಿಬಿದನೂರು ಅಂಜನೇಯರೆಡ್ಡಿ, ಗುಡಿಬಂಡೆ ರಾಮನಾಥ್, ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಪ್ರಮುಖರಾದ ಈಶ್ವರಾಚಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin