ಎತ್ತಿನಹೊಳೆ ಯೋಜನೆಯಿಂದ ಗ್ರಾಮಗಳಲ್ಲಿ ನೀರಿನ ಬವಣೆ ತಪ್ಪಿಸಬಹುದು :ಶಾಸಕ ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

ct--ravi

ಬೇಲೂರು, ನ.17- ಎತ್ತಿನಹೊಳೆ ಮೂಲಕ ಬೇಲೂರು ತಾಲೂಕಿನ ಹಳೇಬೀಡು ಬಾಗದ ಕೆರೆಗಳಿಗೆ ನೀರು ಬಂದರೆ, ಚಿಕ್ಕಮಗಳೂರು ಭಾಗದ ಕೆಲ ಗ್ರಾಮಗಳಲ್ಲಿ ನೀರಿನ ಭವಣೆಯನ್ನು ತಪ್ಪಿಸಬಹುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.ತಾಲ್ಲೂಕಿನ ಗಡಿಭಾಗದಲ್ಲಿನ ಭದ್ರಕಾಳಿ ಬನದ ಶ್ರೀವೀರಭದ್ರೇಶ್ವರಸ್ವಾಮಿ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆ ಮಲೆನಾಡು ಪ್ರದೇಶಗಳಾಗಿದ್ದು, ರಾಜ್ಯದ ಎಲ್ಲಾ ಭಾಗದಲ್ಲೂ ಬರಗಾಲ ಬಂದರೂ ಈ ಭಾಗದಲ್ಲಿ ಜೀವನ ನಡೆಸುವುದಕ್ಕೆ ಕಷ್ಟವಿಲ್ಲ ಎಂಬ ಮಾತಿತ್ತು, ಆದರೆ ಈ ಬಾರಿ ಕೆರೆ ಕಟ್ಟೆಗಳು, ನದಿಗಳು ಬತ್ತಿರುವುದರಿಂದ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರಾಜ್ಯ ಸರ್ಕಾರ ಈ ವಿಷಯವನ್ನು ಗಂಬೀರವಾಗಿ ಪರಿಗಣಿಸಿ ಕೆರೆ ಕಟ್ಟೆಗಳಿಗೆ ಹಾಗೂ ನದಿಗಳಿಗೆ ಜೀವಸೆಲೆ ನೀಡುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮಿಜಿ, ಮನುಷ್ಯ ತಾನು ಮಾಡುವ ಕೆಲಸದಲ್ಲಿ ಏಕಾಗ್ರತೆಯಿಂದ ಮಾಡಿದರೆ ಆವನ ಸಾಧನೆಗೆ ಕಾರಣವಾಗುತ್ತದೆ ಎಂದ ಅವರು ಪ್ರತಿಯೊಬ್ಬರು ಜನಪರ ಹಾಗೂ ಸಾಮಾಜಮುಖಿ ಸೇವಾ ಮನೋಭಾವಗಳೊಂದಿಗೆ ಸೇವೆ ಸಲ್ಲಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯೆ ಗಾಯಿತ್ರಿಶಾಂತೇಗೌಡ, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಯ್ಯದ್ ತೌಫಿಕ್, ಮಂಜಪ್ಪ, ಟ್ರಸ್ಟ್ ಅಧ್ಯಕ್ಷ ಬಿ.ಶಿವರುದ್ರಪ್ಪ, ವೀರಶೈವ ಮಹಾಸಭಾದ ಅಧ್ಯಕ್ಷ ರಾಜಶೇಖರ್, ತಾಪಂ ಸದಸ್ಯೆ ಸವಿತಾ, ಅಂಬಳೆ ಜಿ,ಪಂ ಸದಸ್ಯೆ ಪ್ರೇಮಾಮಂಜುನಾಥ್, ಚಿಕ್ಕಮಗಳೂರು ತಾ,ಪಂ. ಅಧ್ಯಕ್ಷ ಮಹೇಶ್, ಗ್ರಾ.ಪಂ.ಅಧ್ಯಕ್ಷೆ ಕಮಲಮ್ಮ ಇನ್ನಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin