ಎನ್ಎಸ್ ಜಿಯಲ್ಲಿ ಭಾರತ ಸದಸ್ಯತ್ವಕ್ಕೆ ಕಾಲ ಸನ್ನಿಹಿತ

ಈ ಸುದ್ದಿಯನ್ನು ಶೇರ್ ಮಾಡಿ

nsg

ವಾಷಿಂಗ್ಟನ್, ಆ.27-ಪರಮಾಣು ಪೂರೈಕೆದಾರರ ಸಮೂಹ (ಎನ್ಎಸ್ಜಿ)ದಲ್ಲಿ ಸದಸ್ಯತ್ವ ಪಡೆಯಲು ಭಾರತ ನಡೆಸುತ್ತಿರುವ ಪ್ರಯತ್ನಗಳು ಈಡೇರುವ ಕಾಲ ಸನ್ನಿಹಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ. ಈ ವಿಷಯವನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲು ಇರಬಹುದಾದ ಅವಕಾಶಗಳ ಪರಿಶೀಲನೆಯನ್ನು ಅಮೆರಿಕ ಮುಂದುವರಿಸಲಿದೆ ಎಂದು ಅಧ್ಯಕ್ಷರ ಇಂಗಿತವನ್ನು ಉಲ್ಲೇಖಿಸಿ ಅಮೆರಿಕ ವಿದೇಶಾಂಗ ಇಲಾಖೆ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.  ಅವರಿಕ ವಿದೇಶಾಂಗ ಸಚಿವ ಜಾನ್ ಕೇರ್ರಿ ಭಾರತದಲ್ಲಿ ಪ್ರವಾಸ ಕೈಗೊಳ್ಳುವುದಕ್ಕೆ ಮುನ್ನ ದಕ್ಷಿಣ ಏಷ್ಯಾ ವರದಿಗಾರರ ಸಮೂಹದೊಂದಿಗೆ ಮಾತನಾಡಿ, ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin