ಎನ್ಕೌಂಟರ್ ನಲ್ಲಿ ಕುಖ್ಯಾತ ಭಯೋತ್ಪಾದಕ ಚೌಧರಿ ಸೇರಿ 3 ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Dhaka-01

ಢಾಕಾ, ಆ.27- ಇಪ್ಪತ್ತೆರಡು ಜನರ ಸಾವಿಗೆ ಕಾರಣವಾದ ಗುಲ್ಷನ್ ಕೆಫೆ ದಾಳಿ ಪ್ರಕರಣದ ಪ್ರಮುಖ ರೂವಾರಿ ಕೆನಡಾ-ಬಾಂಗ್ಲಾದೇಶ ಮೂಲದ ಟಾಮಿಮ್ ಅಹಮದ್ ಚೌಧರಿ ಮತ್ತು ಇನ್ನಿಬ್ಬರು ಇಂದು ಬೆಳಿಗ್ಗೆ ಬಾಂಗ್ಲಾದೇಶ ರಾಜಧಾನಿ ಕಾಬೂಲ್ ಬಳಿ ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ.   ಗುಲ್ಷನ್ ಕೆಫೆ ದಾಳಿ ಘಟನೆಯ ಮಾಸ್ಟರ್ ಮೈಂಡ್ ಸೇರಿದಂತೆ ಮೂವರು ಭಯೋತ್ಪಾದಕರು ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.   ಕಾಬೂಲ್ ಬಳಿ ಇರುವ ನರಾಯನ್ಗಂಜ್ ಪಿಕೆಪಾರಾದ ಕಟ್ಟಡದಲ್ಲಿ ಚೌಧರಿ ಮತ್ತು ಆತನ ಇಬ್ಬರು ಸಹಚರರು ಅಡಗಿರುವ ಮಾಹಿತಿ ತಿಳಿದು ಪೊಲೀಸರು ಇಂದು ಬೆಳಿಗ್ಗೆ ಆ ಕಟ್ಟಡವನ್ನು ಸುತ್ತುವರೆದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕೆಫೆ ದಾಳಿಯ ಪ್ರಮುಖ ರೂವಾರಿ ಚೌಧರಿ ಮತ್ತು ಇನ್ನಿಬರು ಉಗ್ರರು ಹತರಾದರು.

ಕಳೆದ ಜುಲೈ 1ರಂದು ಗುಲ್ಚನ್ ಕೆಫೆ ಮೇಲೆ ದಾಳಿಯಲ್ಲಿ 22 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಭಾರತೀಯ ಯುವತಿ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳೂ ಸಾವಿಗೀಡಾಗಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin