ಎನ್‍ಕೌಂಟರ್‍ ನಲ್ಲಿ ಕುಖ್ಯಾತ ಪಾತಕಿ ನಯೀಂ ಖತಂ

ಈ ಸುದ್ದಿಯನ್ನು ಶೇರ್ ಮಾಡಿ

Nayeem

ಹೈದ್ರಾಬಾದ್, ಆ.8- ಐಪಿಎಸ್ ಅಧಿಕಾರಿ ಮತ್ತು ಮಾಜಿ ನಕ್ಸಲ್ ನಾಯಕರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಪಾತಕಿ ನಯೀಂ ಇಂದು ಬೆಳಗ್ಗೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ತೆಲಂಗಾಣದ ಮೆಹಬೂಬ್‍ನಗರ ಜಿಲ್ಲೆಯ ಶಾದ್ ನಗರದಲ್ಲಿರುವ ಮಿಲೇನಿಯಂ ಬಡಾವಣೆ ಮನೆಯೊಂದರಲ್ಲಿ ನಯೀಂ ಅಡಗಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ತೆಲಂಗಾಣ ನಕ್ಸಲ್ ನಿಗ್ರಹ ಪಡೆ-ಗ್ರೇಹೌಂಡ್ ನಿನ್ನೆ ರಾತ್ರಿಯಿಂದಲೇ ಈ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಡೆಸಿತು. ತನ್ನನ್ನು ಬಂಧಿಸಲು ಬಂದ ಸಿಬ್ಬಂದಿ ಮೇಲೆ ನಯೀಂ ಗುಂಡು ಹಾರಿಸಿದ. ಇದಕ್ಕೆ ಉತ್ತರವಾಗಿ ಗ್ರೇಹೌಂಡ್ ಪ್ರತಿದಾಳಿ ನಡೆಸಿದಾಗ ನಯೀಂ ಹತನಾದ.
ಮೂಲತಃ ನಲಗೊಂಡ ಜಿಲ್ಲೆಯ ಭುವನಗಿರಿನಗರದ ನಿವಾಸಿಯಾದ ಈ ನಟೋರಿಯಸ್ ಪಾತಕಿ  1993ರಲ್ಲಿ ಐಪಿಎಸ್ ಅಧಿಕಾರಿ ವ್ಯಾಸ್ ಹಾಗೂ ಹಲವು ಮಾಜಿ ನಕ್ಸಲ್ ಮುಖಂಡರ ಕಗ್ಗೊಲೆಗಳಿಗೆ ಕಾರಣನಾಗಿದ್ದ. ಹಲವಾರು ಅಪರಾಧ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಪೊಲೀಸರು ಮತ್ತು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿದ್ದ ನಯೀಂ ತನ್ನ ಪಾತಕ ಕೃತ್ಯಗಳಿಗೆ ಈಗ ಬೆಲೆ ತೆತ್ತಿದ್ದಾನೆ.

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin