ಎನ್‍ಜಿಒಗಳ ವಿರುದ್ಧ 159 ಎಫ್‍ಐಆರ್‍ ದಾಖಲಿಸಿಕೊಳ್ಳಲು ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

NGO--01

ನವದೆಹಲಿ, ಏ.26- ನೀಡಲಾದ ಹಣ ದುರ್ಬಳಕೆ ಅಥವಾ ದುರ್ವಿನಿಯೋಗ ಆರೋಪಗಳಿಗಾಗಿ ವಿವಿಧ ಎನ್‍ಜಿಒಗಳ (ಸರ್ಕಾರೇತರ ಸಂಸ್ಥೆಗಳು) 159 ಎಫ್‍ಐಆರ್‍ಗಳನ್ನು ದಾಖಲಿಸಿಕೊಳ್ಳಲು ಸರ್ಕಾರಿ ಏಜೆನ್ಸಿ ಕೌನ್ಸಿಲ್ ಫಾರ್ ಅಡ್ವಾನ್ಸ್ಡ್ ಆಫ್ ಪೀಪಲ್ಸ್ ಆಕ್ಷನ್ ಅಂಡ್ ರೂರಲ್ ಟೆಕ್ನಲಾಜಿ(ಸಿಎಪಿಎಆರ್‍ಟಿ) ಶಿಫಾರಸು ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಇಂದು ಮಾಹಿತಿ ನೀಡಿದೆ.  ಈ ಸರ್ಕಾರಿ ಏಜೆನ್ಸಿಯು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಘ-ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುತ್ತದೆ.ಈ ಪ್ರಕ್ರಿಯೆಯನ್ನು ಅನುಸರಿಸದ ಹಾಗೂ ಅವುಗಳ ಲೆಕ್ಕಪತ್ರ ವಿವರಗಳನ್ನು ಸಲ್ಲಿಸದ 718 ಎನ್‍ಜಿಒಗಳನ್ನು ಆರಂಭದಲ್ಲಿ ಕಪ್ಪುಪಟ್ಟಿಗೆ ಸೇರಿಲಾಗಿತ್ತು, ಈ ಪೈಕಿ 15 ಎನ್‍ಜಿಒಗಳನ್ನು ಬ್ಲಾಕ್‍ಲಿಸ್ಟ್‍ನಿಂದ ತೆಗೆದು ಹಾಕಲಾಗಿತ್ತು ಎಂದು ಸರ್ವೋಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರಿಗೆ ಮಾಹಿತಿ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin