ಎನ್‍ಡಿಟಿವಿಗೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ವಾಟಾಳ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagaraj-021

ಬೆಂಗಳೂರು, ನ.6-ಎನ್‍ಡಿ ಟಿವಿ ಮೇಲೆ ನಿರ್ಬಂಧ ಹೇರಿದ್ದು, ಪ್ರಜಾತಂತ್ರ ವ್ಯವಸ್ಥೆಯ ಅಪಾಯಕಾರಿ ಧೋರಣೆ ಯಾಗಿದೆ. ತುರ್ತು ಪರಿಸ್ಥಿತಿಯ ನೆನಪನ್ನು ಮರುಕಳಿಸುವಂತೆ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕೇಂದ್ರ ಸರ್ಕಾರದ ಭೂತದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಮಾಧ್ಯಮ ಸ್ವಾತಂತ್ರ್ಯಕ್ಕೆ ಕೇಂದ್ರ ಸರ್ಕಾರ ಧಕ್ಕೆ ತರುವ ಕೆಲಸ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರವೆಸಗಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು.

ಪಠಾಣ್‍ಕೋಟ್ ವಾಯು ನೆಲೆ ಮೇಲಿನ ದಾಳಿ ಸಂದರ್ಭ ದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ ಪ್ರಸಾರ ಮಾಡಿದ್ದಕ್ಕೆ ಎನ್‍ಡಿ ಟಿವಿ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿ ರುವುದು ಖಂಡನೀಯ.  ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳಲು ಅದರದೇ ಆದ ಕೆಲ ಮಾರ್ಗಗಳಿರುತ್ತವೆ. ಅವುಗಳನ್ನೆಲ್ಲ ಗಾಳಿಗೆ ತೂರಿ ಟಿವಿ ಪ್ರಸಾರವನ್ನೇ ಒಂದು ದಿನ ನಿರ್ಬಂಧಿಸುವ ಮೂಲಕ ಕರಾಳ ವ್ಯವಸ್ಥೆಯನ್ನೇ ಜಾರಿ ಮಾಡಲು ಕೇಂದ್ರ ಮುಂದಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ನೇರವಾಗಿ ನಿಯಂತ್ರಣಾ ನಿರ್ಬಂಧ ಹೇರುವ ಬದಲಿಗೆ ವಿಚಾರಣೆ ನಡೆಸಿ ಎಚ್ಚರಿಕೆ ನೀಡುವ ನೋಟಿಸ್ ಕೊಡಬಹುದಿತ್ತು. ಸಂಪಾದಕರನ್ನು ಕರೆಸಿ ಚರ್ಚೆ ಮಾಡಬಹುದಿತ್ತು. ಆದರೆ ಹಾಗೆ ಮಾಡದೆ ಟಿವಿ ಪ್ರಸಾರ ನಿರ್ಬಂಧ ಕ್ರಮ ಕೈಗೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ಮಾಧ್ಯಮಗಳು ಕೂಡ ರಕ್ಷಣಾ ವಿಷಯದಲ್ಲಿ ಸುದ್ದಿ ಪ್ರಸಾರ ಮಾಡುವಾಗ ಯಾವುದನ್ನು ತೋರಿಸಬೇಕು, ಯಾವುದನ್ನು ತೋರಿಸಬಾರದು ಎಂಬ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು.  ದೇಶದ ರಕ್ಷಣೆಯ ಗೌಪ್ಯತೆ ಯನ್ನೂ ಕೂಡ ಕಾಪಾಡ ಬೇಕಾಗಿ ರುವುದು ಕರ್ತವ್ಯ ಆಗಿರುತ್ತದೆ. ಹಾಗೆಂದ ಮಾತ್ರಕ್ಕೆ ಅವುಗಳನ್ನು ನಿರ್ಬಂಧ ಮಾಡುವುದು ಪ್ರಜಾತಂತ್ರಕ್ಕೆ ವಿರೋಧವಾಗಿದೆ ಎಂದು ಅವರು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin