ಎನ್‍ಡಿಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ, ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

NDTV--01

ನವದೆಹಲಿ, ಜೂ.5- ಎನ್‍ಡಿಟಿವಿ (ನ್ಯೂ ಡೆಲ್ಲಿ ಟೆಲಿವಿಷನ್) ಸಂಸ್ಥಾಪಕ ಪ್ರಣಯ್ ರಾಯ್ ಅವರ ದೆಹಲಿ ಹಾಗೂ ಡೆಹ್ರಾಡೂನ್‍ನ ನಿವಾಸಗಳ ಮೇಲೆ ಕೇಂದ್ರೀಯ ತನಿಖಾ ದಳ-ಸಿಬಿಐ ಇಂದು ದಾಳಿ ಮಾಡಿ ಶೋಧ ನಡೆಸಿತು. ಖಾಸಗಿ ಬ್ಯಾಂಕೊಂದಕ್ಕೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.  ಐಸಿಐಸಿಐ ಬ್ಯಾಂಕಿಗೆ 18 ಕೋಟಿ ರೂ.ಗಳ ನಷ್ಟಕ್ಕೆ ಕಾರಣವಾದ ಆರೋಪದ ಮೇಲೆ ಪ್ರಣಯ್ ರಾಯ್, ಅವರ ಪತ್ನಿ ರಾಧಿಕಾ ಮತ್ತು ಆರ್‍ಆರ್‍ಪಿಆರ್ ಹೋಲ್ಡಿಂಗ್ಸ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.ಈ ಸಂಬಂಧ ರಾಜಧಾನಿ ಮತ್ತು ಡೆಹ್ರಾಡೂನ್‍ನ ನಾಲ್ಕು ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿ ಶೋಧ ನಡೆಸಿತು ಎಂದು ಮೂಲಗಳು ಹೇಳಿವೆ.

ದಾಳಿಗೆ ಖಂಡನೆ :

ಪ್ರಣಯ್ ರಾಯ್ ನಿವಾಸಗಳ ಮೇಲೆ ನಡೆದ ಸಿಬಿಐ ದಾಳಿಯನ್ನು ಖಂಡಿಸಿರುವ ಎನ್‍ಡಿಟಿವಿ ಮತ್ತು ಅದರ ಪ್ರವರ್ತಕರು, ತನಿಖಾ ಸಂಸ್ಥೆಯ ಏಕಪಕ್ಷೀಯ ಕ್ರಮದ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin