ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಕ್ಕಿ ಬಿದ್ದ ಟೊಮ್ಯಾಟೋ ಕಳ್ಳ..!

ಈ ಸುದ್ದಿಯನ್ನು ಶೇರ್ ಮಾಡಿ

Tomato--01

ಚಿಂತಾಮಣಿ, ಜು.25- ಚಿನ್ನ, ಹಣ, ವಾಹನ ಕದಿಯೋದು ನೋಡಿದೀವಿ…. ಟೊಮ್ಯಾಟೋ ಕಳ್ಳರನ್ನು ನೋಡಿದ್ದೀರಾ… ಖಂಡಿತಾ ಇದ್ದಾರೆ… ಏಕೆಂದರೆ ಟೊಮ್ಯಾಟೋಗೆ ಈಗ ಚಿನ್ನದ ಬೆಲೆ ಬಂದಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಕದಿಯಲು ಹೋಗಿ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ.
ಶಿಡ್ಲಘಟ್ಟ ತಾಲೂಕಿನ ಪಿಂಡಿ ಪಾಪನಹಳ್ಳಿಯ ನಿವಾಸಿ ವೆಂಕಟೇಶ್ ಟೊಮ್ಯಾಟೋ ಕದ್ದು ಸಿಕ್ಕಿ ಬಿದ್ದ ವ್ಯಕ್ತಿ ಎಂದು ತಿಳಿದು ಬಂದಿದೆ.
ಎಪಿಂಎಂಸಿ ಮಾರುಕಟ್ಟೆಯ ಊಲವಾಡಿ ರಸ್ತೆಗೆ ಹೊಂದಿ ಕೊಂಡಿರುವ ವಿಎಸ್‍ಆರ್ ಟೊಮ್ಯಾಟೋ ಮಂಡಿಗೆ ಬರುವ ರೈತರು ಟೊಮ್ಯಾಟೋ ಬುಟ್ಟಿಯೊಂದು ಕಡಿಮೆ ಆಗಿರುವ ಬಗ್ಗೆ ಹೇಳುತ್ತಿದ್ದರು.

ಕಳೆದ ಹದಿನೈದು ದಿನಗಳಿಂದ ದಿನಕ್ಕೆ ಒಬ್ಬೊಬ್ಬ ರೈತರು ಒಂದೊಂದು ಬುಟ್ಟಿ ಕಡಿಮೆ ಇರುವ ಬಗ್ಗೆ ಚಕಾರ ಎತ್ತುತ್ತಿದ್ದ ಹಿನ್ನೆಲೆಯಲ್ಲಿ ಮಂಡಿಯ ಮಾಲೀಕರು ಮಂಡಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಎಚ್ಚರಿಕೆಯಿಂದ ನೋಡಿ ಕೊಳ್ಳುವಂತೆ ಸೂಚಿಸಿದ್ದರು.   ಅದರಂತೆ ನಿನ್ನೆ ಬೆಳಗಿನ ಜಾವ 5 ಗಂಟೆಯ ಸಮಯದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಟೊಮ್ಯಾಟೋ ಬಾಕ್ಸ್‍ಗಳನ್ನು ಜೋಡಿಸಿರುವ ಮೂಲೆಗೆ ಹೋಗಿ ವಾಹನ ನಿಲ್ಲಿಸಿ ಅತ್ತ ಇತ್ತ ಓಡಾಡಿಕೊಂಡು ದಿಢೀರನೆ 15 ಕೆ.ಜಿ. ತೂಕದ ಟೊಮ್ಯಾಟೋ ಪ್ಲಾಸ್ಟಿಕ್ ಕ್ರೇಟ್ ಇಟ್ಟುಕೊಂಡು ವಾಹನ ಚಾಲನೆ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ರೈತರು ಮತ್ತು ಮಂಡಿಯವರು ಹಿಡಿದು ಧರ್ಮದೇಟು ನೀಡಿದ್ದಾರೆ.
ಕಳ್ಳನನ್ನು ಹಿಡಿದ ಮಂಡಿಯ ಬಳಿ ಕರೆ ತಂದು ವಿಚಾ ರಣೆ ನಡೆಸಿದಾಗ ಕಳೆದ ಹತ್ತು ದಿನಗಳಿಂದ ಈರೀತಿ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ.
ಕಳೆದ ಹತ್ತು ದಿನಗಳ ಹಿಂದೆ ಯಷ್ಟೇ ತಾಲೂಕಿನ ದೊಡ್ಡ ಗಂಜೂರು ಗ್ರಾಮದ ರೈತ ಅನಂದ್ ಎಂಬುವರು ತಮ್ಮ ತೋಟದಲ್ಲಿ ಬೆಳೆದಿದ್ದ ಟೊಮ್ಯಾಟೋವನ್ನು ಕಿತ್ತು 15 ಕೆ.ಜಿ. ತೂಕದ 64 ಪ್ಲಾಸ್ಟಿಕ್ ಕ್ರೇಟ್‍ಗಳಿಗೆ ತುಂಬಿ ಬೆಳಿಗ್ಗೆ ಮಾರು ಕಟ್ಟೆಗೆ ಸಾಗಿಲು ತೋಟದ ಪಕ್ಕದಲ್ಲಿ ಹಾದು ಹೋಗುವ ರಸ್ತೆಯ ಪಕ್ಕದಲ್ಲಿ ಇರಿಸಿದ್ದು ಬೆಳಿಗಿನ ಜಾವ ಮಾರುಕಟ್ಟೆಗೆ ಬಾಕ್ಸ್ ಗಳನ್ನು ಸಾಗಿಸಲು ಹೋದಾಗ ಯಾವದೋ ವಾಹನಕ್ಕೆ ಟೊಮೆಟೋ ತುಂಬಿಸಿ ಕೊಂಡು ಹೋಗಿ ಖಾಲಿ ಕ್ರೇಟ್‍ಗಳು ಅಲ್ಲಿಯೇ ಬಿಸಾಡಿ ಹೋಗಿದ್ದರು.

ಹೆಚ್ಚಿದ ಟೊಮೆಟೋ ಕಳವು:

ದೇಶದಲ್ಲಿ ಟೊಮ್ಯಾಟೋ ಬೆಳೆಗೆ ಚಿನ್ನದ ಬೆಲೆ ಸಿಕ್ಕಿರುವ ಹಿನ್ನೆಲೆಯಲ್ಲಿ ಟೊಮ್ಯಾಟೋ ಕಳ್ಳರು ತಾಲೂಕಿನಲ್ಲಿ 64 ಕ್ರೇಟ್ ಟೊಮ್ಯಾಟೋ ಕಳ್ಳತನ ಮಾಡಿದ್ದರೆ ಮಧ್ಯಪ್ರದೇಶದ ಇಂದೂರ್‍ನಲ್ಲಿ 30 ಕ್ರೇಟ್ ಟೊಮ್ಯಾಟೋ ಕದ್ದ ಹಿನ್ನೆಲೆಯಲ್ಲಿ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿರುವುದು ಚರ್ಚಾ ವಿಷಯವಾಗಿದೆ.  ಮುಂದಿನ ದಿನಗಳಲ್ಲಿ ಟೊಮ್ಯಾಟೋ ಬೆಲೆ ಇದೇ ರೀತಿ ಏರಿದರೆ ಇಲ್ಲಿನ ಮಾರುಕಟ್ಟೆ ಯಲ್ಲಿಯೂ ಭದ್ರತಾ ಸಿಬ್ಬಂದಿ ನೇಮಕ ಮಾಡುವ ಅವಶ್ಯಕತೆ ಬೀಳುತ್ತದೆಯೇನು ಕಾದು ನೋಡಬೇಕಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin