ಎಪಿಎಂಸಿ ಸ್ಥಾನಕ್ಕೆ ಓಂಕಾರಪ್ಪ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

KADURU
ಕಡೂರು, ಫೆ.15-ಕಳೆದ ತಿಂಗಳು ಕಡೂರು ಕೃಷಿ ಮಾರುಕಟ್ಟೆ ಸಮಿತಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳಿಗೆ ನಿಗದಿಗೊಂಡಿದ್ದರ ಮೇರೆಗೆ ಚುನಾವಣಾಧಿಕಾರಿ ಭಾಗ್ಯ ಕೃಷಿ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿದರು.ಗುಪ್ತ ಮತದಾನದ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಿತು. ಬಿಜೆಪಿ ಬೆಂಬಲಿತ ಓಂಕಾರಪ್ಪ ಇವರಿಗೆ 8 ಮತಗಳು, ಕಾಂಗ್ರೆಸ್‍ನ ಸಿ. ಲೋಕೇಶ ಇವರಿಗೆ 7 ಮತಗಳು ಲಭಿಸಿ ಓಂಕಾರಪ್ಪ ಇವರು ಒಂದು ಮತದ ಅಂತರದಿಂದ ಅಧ್ಯಕ್ಷ ಸ್ಥಾನಕ್ಕೆ ಗೆಲುವು ಸಾಧಿಸಿದರು.ಬಿಜೆಪಿಯ ಅನಸೂಯ ಲೋಕೇಶ್ 8 ಮತ ಪಡೆದು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡರು. ಕಾಂಗ್ರೆಸ್ ಮುಖಂಡ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್ ಇವರು ಚುನಾವಣೆಯ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್ ಮುಖಂಡರಲ್ಲಿ ಇರಿಸು-ಮುರಿಸು ಉಂಟಾಗಿದೆ.

ಬಿಜೆಪಿ ಬೆಂಬಲಿತ ಕಾಂಗ್ರೆಸ್‍ನ ಆರ್. ಓಂಕಾರಪ್ಪ ಅಧ್ಯಕ್ಷ ಸ್ಥಾನಕ್ಕೆ, ಬಿಜೆಪಿ ಯಿಂದ ಗೆದ್ದಿರುವ ಅನಸೂಯ ಓಂಕಾರ್ ಇವರು ಉಪಾಧ್ಯಕ್ಷ ಸ್ಥಾನಕ್ಕೆ ಹಾಗೂ ನೈಜ ಕಾಂಗ್ರೆಸ್‍ನ ಅಭ್ಯರ್ಥಿ ಸಿ. ಲೋಕೇಶ್ ಅಧ್ಯಕ್ಷ ಸ್ಥಾನಕ್ಕೆ, ಜೆಡಿಎಸ್‍ನಿಂದ ಗೆದ್ದಿರುವ ಚಂದ್ರಕಲಾ ಪೆಪ್ಸಿ ಮಲ್ಲೇಶಪ್ಪ ಇವರು ಉಪಾಧ್ಯಕ್ಷ ಸ್ಥಾನಕ್ಕೆ, ಇನ್ನೊಂದು ಗುಂಪಿನಿಂದ ನಾಮಪತ್ರ ಸಲ್ಲಿಸಲಾಗಿತ್ತು.
ಅಧ್ಯಕ್ಷಗಾದಿ ಏರಿದ ನಂತರ ಓಂಕಾರಪ್ಪ ಮಾತನಾಡಿ ಎಲ್ಲಾ ನಿರ್ದೇಶಕರುಗಳ ಎಲ್ಲಾ ಪಕ್ಷಗಳ ಮುಖಂಡರುಗಳ ಸಹಕಾರ ಪಡೆದು ರೈತರಿಗೆ ಉತ್ತಮ ಆಡಳಿತ ನೀಡುವ ಗುರಿ ಹೊಂದಲಾಗಿದೆ ಎಂದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಬೆಳ್ಳಿಪ್ರಕಾಶ್ ಮಾತನಾಡಿ, ಕೃಷಿ ಮಾರುಕಟ್ಟೆಯಲ್ಲಿ 16 ನಿರ್ದೇಶಕರುಗಳಿದ್ದು, ಯಾವುದೇ ಗುಂಪಿಗೆ ಬಹುಮತ ಇಲ್ಲದೇ ಇದ್ದುದರಿಂದ ಇದು ರೈತರ ಸಮಸ್ಯೆಯಾಗಿತ್ತು.

ಕಾಂಗ್ರೆಸ್ ಮುಖಂಡರು ಬಿಜೆಪಿಯೊಂದಿಗೆ ಹೊಂದಾಣಿಕೆಗೆ ಮಾತುಕತೆ ನಡೆಸಿ ಓಂಕಾರ್ಪನವರಿಗೆ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದರು. ಅದೇ ಪ್ರಕಾರ ನಾವು ಮತ ಚಲಾಯಿಸಿದ್ದೇವೆ. ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಮೂಡಿದ್ದರಿಂದ ನಮ್ಮ ಬೆಂಬಲ ಹಿಂದುಳಿದ ವರ್ಗದಿಂದ, ರೈತ ಕುಟುಂಬದಿಂದ ಒಳ್ಳೆಯ ಗುಣ ಹೊಂದಿರುವ ಓಂಕಾರಪ್ಪನವರ ಆಯ್ಕೆಗೆ ಬೆಂಬಲಿಸಿದ್ದೇವೆ ಎಂದು ತಿಳಿಸಿದ್ದರು.ಜಿ.ಪಂ. ವಿಜಯಕುಮಾರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಕಲ್ಮುರುಡಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಚಿಕ್ಕದೇವನೂರು ರವಿ, ಹೆಚ್.ಎಂ. ರೇವಣ್ಣಯ್ಯ, ಬಂಕ್ ಮಂಜು ಮತ್ತಿತರರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin