ಎಬಿವಿಪಿ ಪ್ರತಿಭಟನೆ ರಾಜಕೀಯ ಪ್ರೇರಿತ : ಕಾಂಗ್ರೆಸ್ ಕಾರ್ಯಕರ್ತರ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Abvp-CVongersd-zs

ಬೆಂಗಳೂರು, ಆ.23-ದೇಶ ಪ್ರೇಮದ ಹೆಸರಿನಲ್ಲಿ ಎಬಿವಿಪಿ ನಡೆಸಿದ ಹೋರಾಟ ರಾಜಕೀಯ ಪ್ರೇರಿತ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಆಮ್ನೆಸ್ಟಿ ಸಂಘಟನೆ ದೇಶ ವಿರೋಧಿ ಘೋಷಣೆ ಕೂಗಿದ್ದರೆ ಸರ್ಕಾರ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತದೆ. ಇಂತಹ ಘಟನೆಗೆ ಪೂರಕವಾದ ಸಾಕ್ಷ್ಯಾಧಾರಗಳಿದ್ದರೆ ಸರ್ಕಾರಕ್ಕೆ ಒದಗಿಸಬೇಕು, ಅದನ್ನು ಬಿಟ್ಟು ರಾಜಕೀಯಪ್ರೇರಿತ ಪ್ರತಿಭಟನೆ ಮಾಡುವುದು ಎಷ್ಟು ಸಮಂಜಸ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಜಿ.ಜನಾರ್ಧನ್, ಎಸ್.ಮನೋಹರ್, ಸುಧಾಕರ್, ಶೇಖರ್ ಮುಂತಾದವರು ಪ್ರತಿಭಟನೆ ನಡೆಸಿ ಎಬಿವಿಪಿಯವರ ಹಿಂಸಾತ್ಮಕ ಘಟನೆಗಳನ್ನು ಖಂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಶತ್ರು ರಾಷ್ಟ್ರ ಪಾಕಿಸ್ತಾನ ಪ್ರಧಾನಿಗೆ ಆಹ್ವಾನ ನೀಡುವುದು ಎಷ್ಟು ಸರಿ, ಅದೇ ರೀತಿ ಯಾವುದೇ ಪೂರ್ವ ನಿಗದಿ ಕಾರ್ಯಕ್ರಮವಿಲ್ಲದೆ ಪಾಕಿಸ್ತಾನ ಪ್ರಧಾನಿ ಮಗಳ ಮದುವೆಗೆ ಹೋಗಿ ಬರುವುದು ದೇಶದ್ರೋಹವೇ ಎಂದು ಪ್ರಶ್ನಿಸಿದ್ದಾರೆ.   ಮಾಜಿ ಸಂಸದೆ ರಮ್ಯಾ ಅವರ ಹೇಳಿಕೆಯನ್ನು ಖಂಡಿಸುವ ಎಬಿವಿಪಿಯವರು ಬಿಜೆಪಿ ಮತ್ತು ಸಂಘ ಪರಿವಾರದವರು ಪಾಕಿಸ್ತಾನದ ಪರ ನೀಡಿರುವ ಹೇಳಿಕೆ ಬಗ್ಗೆ ಪರಾಮರ್ಶೆ ನಡೆಸಬೇಕು. ಪ್ರಧಾನಿ ಮೋದಿ, ಸುಷ್ಮಾಸ್ವರಾಜ್, ಲಾಲ್ ಕೃಷ್ಣ ಅಡ್ವಾಣಿಯವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಅವರೆಲ್ಲಾ ನೀಡಿರುವ ಹೇಳಿಕೆಗಳು ದೇಶದ್ರೋಹದ ಹೇಳಿಕೆಗಳೇ ಎಂದು ಪ್ರಶ್ನಿಸಿದ್ದಾರೆ.

ಅನಗತ್ಯವಾಗಿ ಕಪಟ ದೇಶಪ್ರೇಮದ ಹೆಸರಿನಲ್ಲಿ ಹೋರಾಟ ನಡೆಸುತ್ತಿರುವ ಎಬಿವಿಪಿ ಸಂಘಟನೆಯವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದಿರುವ ಪ್ರತಿಭಟನಾಕಾರರು ಕಾಲೇಜು ವಿದ್ಯಾರ್ಥಿಗಳನ್ನು ಬಲವಂತವಾಗಿ ಪ್ರತಿಭಟನೆಗೆ ಕರೆದೊಯ್ದು ರಾಜಕೀಯ ಪ್ರೇರಿತ ಪ್ರತಿಭಟನೆ ಮಾಡುತ್ತಿರುವುದನ್ನು ಖಂಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin