ಎಬಿವಿಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಹೆಚ್ಚಿನ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

ABVP-4

ಬೆಂಗಳೂರು,ಆ.17-ವಿವಾದಿತ ಆಮ್ನೆಸ್ಟಿ ಸಂಘಟನೆಯನ್ನು ನಿಷೇಧಿಸ ಬೇಕು, ದೇಶ ವಿರೋಧಿ ಹೇಳಿಕೆ ನೀಡಿದ, ಸೈನಿಕರಿಗೆ ಅಪಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆರೋಪಿಸಿ ಎಬಿವಿಪಿಯವರು 2ನೇ ದಿನ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದ ಗಣ್ಯರ ಮನೆಗಳಿಗೆ ಬಿಗಿಭದ್ರತೆ ಏರ್ಪಡಿಸಲಾಗಿದೆ.   ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.   ಪ್ರತಿಭಟನೆ ಹಿನ್ನೆಲೆಯಲ್ಲಿ ಟೌನ್ಹಾಲ್, ಕೆ.ಆರ್.ಸರ್ಕಲ್, ವಿಧಾನಸೌಧ, ವಿಕಾಸಸೌಧ, ಮಹಾರಾಣಿ ಕಾಲೇಜು, ರಾಜಭವನ, ಫ್ರೀಡಂಪಾರ್ಕ್, ಚಾಲುಕ್ಯ ಸರ್ಕಲ್ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.   ಮೌರ್ಯ ಸರ್ಕಲ್ ಬಳಿ ಡಿಸಿಪಿ ಬೋರಲಿಂಗಯ್ಯ ಹಾಗೂ ಸಂದೀಪ್ಪಾಟೀಲ್ ಸಿಬ್ಬಂದಿಗಳೊಂದಿಗೆ ಬೀಡು ಬಿಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin