ಎರಡು ಆಟೋಗಳಿಗೆ ಟೆಂಪೋ ಡಿಕ್ಕಿ: ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Tempo

ತುಮಕೂರು, ಅ.14-ಸಾಲು-ಸಾಲು ರಜೆ ನಿಮಿತ್ತ ಐದು ಮಂದಿ ಸ್ನೇಹಿತರು ಎರಡು ಆಟೋಗಳನ್ನು ಬಾಡಿಗೆಗೆ ಪಡೆದು ಪ್ರವಾಸಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಎದುರಿಗೆ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರಿನ ಶ್ರೀರಾಮನಗರದ ಜಗದೀಶ್(22), ಪುನೀತ್(21) ಹಾಗೂ ಲಕ್ಷ್ಮೀಕಾಂತ್(20) ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಹರೀಶ್ ಮತ್ತು ಜಯರಾಂ ಗಾಯಗೊಂಡಿದ್ದು, ತುಮಕೂರು ಜಿಲ್ಲೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಐದು ಮಂದಿ ಸ್ನೇಹಿತರು ಸಾಲು-ಸಾಲು ರಜೆ ನಿಮಿತ್ತ ಎರಡು ಆಟೋಗಳನ್ನು ಬಾಡಿಗೆಗೆ ಪಡೆದು ಧರ್ಮಸ್ಥಳ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಹೊಗಿ ರಾತ್ರಿ 11.30ರಲ್ಲಿ ತುಮಕೂರು-ಕುಣಿಗಲ್ ರಸ್ತೆಯ ಮೂಲಕ ಶಿವಾಂಜನೇಯ ಸ್ವಾಮಿ ದೇವಾಲಯ ಮುಂಭಾಗ ಅಕ್ಕ-ಪಕ್ಕದಲ್ಲಿ ಆಟೋ ಚಲಾಯಿಸಿಕೊಂಡು ಮಾತನಾಡುತ್ತಾ ಬರುತ್ತಿದ್ದಾಗ ಎದುರಿಗೆ ಬಂದ ಟೆಂಪೊೀ ಈ ಆಟೋಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಜಗದೀಶ್ ಮತ್ತು ಪುನೀತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಂಭೀರ ಗಾಯಗೊಂಡಿದ್ದ ಲಕ್ಷ್ಮೀಕಾಂತನನ್ನು ಬೆಂಗಳೂರಿನ ನಿಮಾನ್ಸ್ಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಟೆಂಪೊೀಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಸಕಾಲಕ್ಕೆ ಆಗಮಿಸಿ ಗುಂಪನ್ನು ಚದುರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಟೆಂಪೊೀ ಚಾಲಕನನ್ನು ಬಂಧಿಸಿ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು. ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಕಾಂತರಾಜ್, ವೃತ್ತ ನಿರೀಕ್ಷಕ ಕರಿತಿಮ್ಮಯ್ಯ, ಡಿವೈಎಸ್ಪಿ ಚಿದಾನಂದಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

► Follow us on –  Facebook / Twitter  / Google+

Facebook Comments

Sri Raghav

Admin