ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ : ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

accident--bike

ಹೊಸಕೋಟೆ, ಅ.27-ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಚಿಕ್ಕನಹಳ್ಳಿ ಗೇಟ್ ಬಳಿ ತಡರಾತ್ರಿ ನಡೆದಿದೆ.ಕೆ.ಆರ್.ಪುರ ನಿವಾಸಿ ಪರ್ಕಾತ್ (35), ಕೋಲಾರ ರಹಮತ್‍ನಗರ ನಿವಾಸಿ ಖಲೀಮ್ (50), ದೇವನಹಳ್ಳಿ ತಾಲೂಕು ಹರದನಹಳ್ಳಿ ನಿವಾಸಿ ರವೀಂದ್ರ (32) ಮೃತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಗಾಯಗೊಂಡು ರೋಹಿತ್ ಮತ್ತು ಚಾಂದ್‍ಪಾಷ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಹೊಸಕೋಟೆ ತಾಲೂಕು, ಕೋಲಾರ ಹೆದ್ದಾರಿ ಸಮೀಪ ಎದುರು-ಬದುರು ವೇಗವಾಗಿ ಬರುತ್ತಿದ್ದ ಎರಡು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ.ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin