ಎರಡೂವರೆ ಲಕ್ಷ ಮೌಲ್ಯದ ಬಂಗಾರದ ಸರಗಳನ್ನು ಕಸಿದು ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

chain

ದಾವಣಗೆರೆ,ಸೆ.30- ವಾಯುವಿಹಾರ ಮಾಡುತ್ತಿದ್ದ ಗೃಹಿಣಿ ಮೇಲೆ ಬೈಕ್‍ಧಾರಿಗಳು ಹಲ್ಲೆ ನಡೆಸಿ ಎರಡೂವರೆ ಲಕ್ಷ ರೂ. ಮೌಲ್ಯದ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿನೋಭನಗರದ ನಿವಾಸಿ ಸರಸ್ವತಿ(60) ಸರ ಕಳೆದುಕೊಂಡ ಮಹಿಳೆ. ಸರಸ್ವತಿ ಅವರು ಎಂದಿನಂತೆ ಅಮೃತಾನಂದಮಯಿ ಶಾಲೆ ಬಳಿ ಇರುವ ವರ್ತುಲ ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದಾಗ, ಹಿಂದಿನಿಂದ ಬಂದ ಬೈಕ್‍ಧಾರಿಗಳು ಕಟ್ಟಿಗೆಯಿಂದ ತಲೆಗೆ ಹೊಡಿದಿದ್ದಾರೆ. ಇದರಿಂದ ಗೃಹಿಣಿ ಎಚ್ಚರತಪ್ಪಿ ಕೆಳಗೆ ಬಿದ್ದಿದ್ದಾರೆ.
ತಕ್ಷಣ ಬೈಕ್‍ಧಾರಿಗಳು ಆಕೆಯ ಕೊರಳಲಿದ್ದ 60 ಗ್ರಾಂ ತೂಕದ ಬಂಗಾರದ ಸರ ಮತ್ತು 25 ಗ್ರಾಂ ತೂಕದ ಗಣೇಶ ಡಾಲರ್ ಇರುವ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಗಳ್ಳರಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin