ಎಲೆಕ್ಷನ್ ಗೇಮ್ ಪ್ಲಾನ್ : ಆಗಷ್ಟ್ ನಲ್ಲಿ ರಾಜ್ಯಕ್ಕೆ ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

Amith-Shah--01

ಬೆಂಗಳೂರು,ಜೂ.24-ಮುಂದಿನ ವಿಧಾನಸಭೆ ಚುನಾವಣೆಗೆ ರಾಜ್ಯದ ನಾಯಕರನ್ನು ಸಿದ್ಧಗೊಳಿಸುವ ಸಲುವಾಗಿ ರಾಜ್ಯಕ್ಕೆ ಮೂರು ದಿನದ ಭೇಟಿ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿರ್ಧರಿಸಿದ್ದಾರೆ. ಅಂತೆಯೇ ಆ.3 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯಕ್ಕೆ ಭೇಟಿ ನೀಡುವ ಈ ಸಂದರ್ಭದಲ್ಲಿ ಅವರು ರಾಜ್ಯದ ಎಲ್ಲಾ ಬಿಜೆಪಿ ಮುಖಂಡರ ಜತೆ ವೈಯಕ್ತಿಕವಾಗಿ ಚರ್ಚೆ ನಡೆಸಿ, ಸಾಧಕ, ಬಾಧಕಗಳನ್ನು ತಿಳಿದುಕೊಳ್ಳಲಿದ್ದಾರೆ. ವಿಶೇಷವೆಂದರೆ ವಿವಿಧ ನಾಯಕರನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿರುವ ಅಮಿತ್ ಷಾ, ತಮ್ಮದೇ ಆದ ಇತರೆ ಮೂಲಗಳಿಂದ ರಾಜ್ಯದ ವಿವಿಧ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅದನ್ನು ಈ ಭೇಟಿ ಸಂದರ್ಭ ಚರ್ಚಿಸಿ ಖಚಿತಪಡಿಸಿಕೊಳ್ಳಲಿದ್ದಾರೆ.

ಈಗಾಗಲೇ ಪಕ್ಷದ ಆಂತರಿಕ ಗೊಂದಲ ನಿವಾರಣೆಯಾಗಿದ್ದು, ರಾಜ್ಯ ನಾಯಕರೆಲ್ಲಾ ಒಟ್ಟಾಗಿ ಕೇಂದ್ರದ ಮೂರು ವರ್ಷದ ಸಾಧನೆಯನ್ನು ರಾಜ್ಯದ ಉದ್ದಗಲಕ್ಕೂ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಬರದ ಸಮಸ್ಯೆ ವಿರುದ್ಧ ದನಿ ಎತ್ತಿದ್ದಾರೆ. ಇದೆಲ್ಲದರ ಬಗ್ಗೆ ಅಮಿತ್ ಷಾ ತೃಪ್ತಿ ಹೊಂದಿದ್ದು, ಈ ಭೇಟಿ ಸಂದರ್ಭ ಪ್ರಮುಖವಾಗಿ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ, ಒಗ್ಗಟ್ಟು ಮೂಡಿಸುವುದು, ಮುಖಂಡರ ನಡುವೆ ಸಾಮರಸ್ಯ ಹೆಚ್ಚಿಸುವುದು, ಪದಾಕಾರಿಗಳ ಕಾರ್ಯವೈಖರಿ ಚುರುಕುಗೊಳಿಸುವುದು ಇವರ ಭೇಟಿಯ ಪ್ರಮುಖ ಉದ್ದೇಶವಾಗಿದೆ.

ಏನು ಕಾರ್ಯಕ್ರಮ :

ಮೊದಲ ಎರಡು ದಿನ ವಿವಿಧ ಹಂತದ ನಾಯಕರೊಂದಿಗೆ ಅಮಿತ್ ಷಾ ಚರ್ಚಿಸಲಿದ್ದಾರೆ. ಕೊನೆಯ ದಿನ ವಿವಿಧ ಮೋರ್ಚಾಗಳ ಹಾಗೂ ಕೆಲ ಜಿಲ್ಲಾ ಮಟ್ಟದ ನಾಯಕರ ಜತೆ ಸಮಾಲೋಚಿಸಲಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಬಲಪಡಿಸುವುದು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಅಕಾರಕ್ಕೆ ಬರುವುದು ಬಿಜೆಪಿಯ ಮುಖ್ಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಚುನಾವಣೆಗೆ ವರ್ಷವಿರುವಾಗಲೇ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.

ಒಟ್ಟಾರೆ ಚುನಾವಣೆಗೆ ಪಕ್ಷಗಳೆಲ್ಲಾ ಸಂಘಟನೆಗೆ ಮುಂದಾಗಿವೆ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಆಗಾಗ ಭೈೀಟಿ ನೀಡುತ್ತಿದ್ದರೆ, ಬಿಜೆಪಿ ಹಿರಿಯ ನಾಯಕರು ಕೂಡ ಕಾಲಕಾಲಕ್ಕೆ ರಾಜ್ಯಕ್ಕೆ ಆಗಮಿಸಿ ಪರಿಶೀಲಿಸಿ ತೆರಳುತ್ತಿದ್ದಾರೆ. ಮತ್ತೊಂದೆಡೆ ಜೆಡಿಎಸ್ ನಾಯಕರು ಕೂಡ ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ಮುಂದಿನ ವಿಧಾನಸಭೆ ಚುನಾವಣೆ ತ್ರಿಕೋನ ಸ್ಪರ್ಧೆಯ ಸ್ಪಷ್ಟ ಮುನ್ಸೂಚನೆ ನೀಡುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin