ಎಲೆಗಳೇ ಈತನ ಆಹಾರ, 25 ವರ್ಷದಿಂದ ಖಾಯಿಲೆಯೇ ಬಂದಿಲ್ಲ…!

ಈ ಸುದ್ದಿಯನ್ನು ಶೇರ್ ಮಾಡಿ

Man-Eat

ಮನುಷ್ಯ ತಾನು ಜೀವಿಸಲು ತನ್ನ ಆಹಾರ ಕ್ರಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡುಕೊಂಡಿದ್ದಾನೆ, ದೇಶದಿಂದ ದೇಶಕ್ಕೆ ಆಹಾರ ಪದ್ಧತಿಗಳು ಬದಲಾವಣೆಯಾಗುತ್ತಲೇ ಇರುತ್ತದೆ.  ಇನ್ನು ಕೆಲವು ವಿಚಿತ್ರ ಸಂದರ್ಭಗಳಲ್ಲಿ ಕೆಲವರು ಬೂದಿ, ಕಾಗದಗಳನ್ನು ತಿಂದು ಜೀವಿಸಿರುವ ನಿದರ್ಶನಗಳನ್ನು ಕೂಡ ಕಂಡು ಕೇಳಿದ್ದೀರಿ. ಇದಕ್ಕೆ ಬಡತನವೊಂದೇ ಕಾರಣವಲ್ಲ.  ಆದರೆ ಈ ಚಿತ್ರದಲ್ಲಿರುವ ಆಸಾಮಿ ತನ್ನ ಕುಟುಂಬದಲ್ಲಿದ್ದ ಬಡತನದ ಬೇಗೆಯಿಂದಲೇ ಎಲೆಗಳನ್ನು ತಿನ್ನುವ ಮೂಲಕ ತನ್ನ ಹೊಟ್ಟೆಯನ್ನು ತುಂಬಿಕೊಳ್ಳುವ ಪರಿಪಾಠ ರೂಢಿಸಿಕೊಂಡಿದ್ದಾನೆ.ಅದು ಒಂದೆರಡು ವರ್ಷದಿಂದಲ್ಲ ಬರೋಬ್ಬರಿ 25 ವರ್ಷಗಳಿಂದಲೂ ಆತ ಎಲೆಗಳನ್ನು ಹಾಗೂ ಮರದ ತುಂಡುಗಳನ್ನೇ ತಿಂದು ಜೀವಿಸುತ್ತಿದ್ದಾನೆ ವಿಚಿತ್ರವೆಂದರೆ ಈತ ಒಮ್ಮೆಯೂ ಕಾಯಿಲೆ ಬಿದ್ದು ಆಸ್ಪತ್ರೆಯತ್ತ ಮುಖ ಮಾಡಿಲ್ಲ.  ಅಂದ ಹಾಗೆ ಈ ವ್ಯಕ್ತಿ ವಾಸಿಸುತ್ತಿರುವುದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ. ಆತನ ಹೆಸರು ಮೆಹಮುದ್ ಬಟ್. ಈತನ ವಯಸ್ಸು 50..!  ಈತ 25 ವರ್ಷದಿಂದಲೂ ಎಲೆ ಮತ್ತು ಮರದ ತುಂಡುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಇದಕ್ಕೆ ಕಾರಣ ಅಂದಿನ ಕಾಲದಲ್ಲಿ ತನ್ನ ಕುಟುಂಬದಲ್ಲಿ ತೀರಾ ಬಡತನದಲ್ಲಿದ್ದು ಭಿಕ್ಷೆ ಬೇಡಿದರೂ ಕೂಡ ಕುಟುಂಬದವರೆಲ್ಲರ ಹೊಟ್ಟೆ ತುಂಬುತ್ತಿರಲಿಲ್ಲ. ಆದ್ದರಿಂದ ಎಲೆ ತಿನ್ನುವುದು ಅನಿವಾರ್ಯವಾಗಿತ್ತು ಮುಂದೆ ಅದೇ ಅಭ್ಯಾಸವಾಯಿತು.

ನಾನು ಈಗ ಪ್ರತಿನಿತ್ಯವೂ ಒಂದು ಕಡೆಯಿಂದ ಮತ್ತೊಂದೆಡೆ ತನ್ನ ಕತ್ತೆಯ ಗಾಡಿಯಿಂದ ಅಂಗಡಿಗಳ, ಗುಜರಿಗಳ ಸಾಮಾನುಗಳನ್ನು ಸಾಗಿಸುವ ಮೂಲಕ ದಿನಕ್ಕೆ 600 ರೂ. ಗಳಿಸುತ್ತೇನೆ ಆದರೂ ಎಲ್ಲರೂ ಸೇವಿಸುವಂತೆ ಸಾಮಾನ್ಯ ಆಹಾರ ಸೇವನೆ ಮಾಡಲು ಮನಸ್ಸು ಬರುತ್ತಿಲ್ಲ . ಇತರೆ ಆಹಾರಕ್ಕಿಂತ ನನಗೆ ಅರಳಿ , ಥಾಲಿ ಮತ್ತು ಸುಕ್ ಚೆನ್ ಮಾದರಿ ಮರಗಳ ಎಲೆಗಳನ್ನು ತಿನ್ನುವುದೆಂದರೆ ಬಲು ಪ್ರೀತಿ ಎಂದು ಹೇಳುತ್ತಾನೆ ಮೆಹಮುದ್ ಬಟ್.

ಕೆಲಸದ ವೇಳೆಯೇ ರಸ್ತೆಯ ಬದಿ ಈ ಮರಗಳು ಕಂಡರೆ ಗಾಡಿ ನಿಲ್ಲಿಸಿ ಮೆಹಮುದ್ ಮರದ ಎಲೆಗಳನ್ನು ತಿನ್ನುವ ಪ್ರವೃತ್ತಿಯನ್ನು ನೋಡಿ ಸುತ್ತಮುತ್ತಲ ಜನರು ಆಶ್ಚರ್ಯಚಕಿತರಾಗಿ ನೋಡುತ್ತಾರೆ.  ಅಂದ ಹಾಗೆ ಮೆಹಮೂದ್ 25 ವರ್ಷಗಳಿಂದಲೂ ಯಾವುದೇ ಖಾಯಿಲೆಗೆ ಒಳಗಾಗಿರುವುದು ಕೂಡ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ ಎಂದು ಸ್ಥಳೀಯ ಗುಲಾಮ್ ಮೆಹಮುದ್ ಸುದ್ದಿಗಾರರಿಗೆ ತಿಳಿಸುತ್ತಾರೆ.  ಉದರ ನಿಮಿತ್ತಂ ಬಹುಕೃತ ವೇಷ ಎನ್ನುವಂತೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಎಂಬ ಮಾತು ಮೆಹಮುದ್‍ರ ಈ ವರ್ತನೆ ಸಾಕ್ಷಿಯಲ್ಲವೇ..!

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin