ಎಲ್ಗರ್ ಆಕರ್ಷಕ ಶತಕ

ಈ ಸುದ್ದಿಯನ್ನು ಶೇರ್ ಮಾಡಿ

ವಿಶಾಖಪಟ್ಟಣ, ಅ.4- ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವಿನ ಮೊದಲ ಟೆಸ್ಟ್‍ನ ಆರಂಭಿಕ ಎರಡು ದಿನಗಳಲ್ಲಿ ಬ್ಯಾಟ್ಸ್‍ಮನ್‍ಗಳು ಮೇಲುಗೈ ಸಾಧಿಸಿದಂತೆ ಇಂದು ಕೂಡ ದಕ್ಷಿಣಆಫ್ರಿಕಾದ ಭರವಸೆಯ ಆಟಗಾರ ಡೀನ್ ಎಲ್ಗರ್ ಆಕರ್ಷಕ ಶತಕ ಸಿಡಿಸುವುದರೊಂದಿಗೆ ತಂಡವನ್ನು ಫಾಲೋಆನ್ ಭೀತಿಯಿಂದ ಪಾರು ಮಾಡಲು ಸರ್ಕಸ್ ನಡೆಸುತ್ತಿದ್ದಾರೆ.

ನಿನ್ನೆ ದಿನದಾಟದ ಅಂತ್ಯಕ್ಕೆ 39 ರನ್‍ಗಳಿಗೆ ಪ್ರಮುಖ 3 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಹರಿಣಗಳ ಬ್ಯಾಟ್ಸ್‍ಮನ್‍ಗಳನ್ನು ಬಲು ಬೇಗ ಔಟ್ ಮಾಡುವ ಮೂಲಕ ಫಾಲೋ ಆನ್ ಹಾಕಲು ಟೀಂ ಇಂಡಿಯಾ ವಿರಾಟ್ ಕೊಹ್ಲಿ ಪ್ಲಾನ್ ರೂಪಿಸಿದ್ದರು.

ಇಂದು ಬ್ಯಾಟಿಂಗ್ ಆರಂಭಿಸಿದ ಹರಿಣ ಬ್ಯಾಟ್ಸ್‍ಮನ್‍ಗಳಾದ ಬುವಾಮಾ (18 ರನ್, 3 ಬೌಂಡರಿ) ಹಾಗೂ ಆರಂಭಿಕ ಆಟಗಾರ ಎಲ್ಗರ್ ನಿಧಾನ ಗತಿಯ ಆಟಕ್ಕೆ ಮುಂದಾಗಿ ತಂಡದ ಮೊತ್ತವನ್ನು 63 ರನ್‍ಗಳಿಗೆ ಹಿಗ್ಗಿಸಿದರು. ಈ ಹಂತದಲ್ಲಿ ಭಾರತದ ವೇಗಿ ಇಶಾಂತ್‍ಶರ್ಮಾ ಎಸೆದ 26.1 ಓವರ್‍ನಲ್ಲಿ ಬುವಾಮಾ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು.

# ಆಸರೆಯಾದ ಪ್ಲೆಸಿಸ್- ಎಲ್ಗರ್:
ಬುವಾಮಾ ಔಟಾದ ನಂತರ ಕ್ರಿಸ್‍ಗೀಳಿದ ದಕ್ಷಿಣ ಆಫ್ರಿಕಾದ ನಾಯಕ ಡ್ಲುಪೆಸಿಸ್, ಎಲ್ಗರ್ ಜೊತೆಗೂಡಿ ದೊಡ್ಡ ಇನ್ನಿಂಗ್ಸ್ ಕಟ್ಟಲು ಮುಂದಾದರು. ಟೀಂ ಇಂಡಿಯಾದ ವೇಗ ಹಾಗೂ ಸ್ಪಿನ್ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿಯು ಭೋಜನ ವಿರಾಮದ ವೇಳೆಗೆ ತಂಡದ ಮೊತ್ತವನ್ನು 150 ರನ್‍ಗಳ ಗಡಿ ದಾಟಿಸಿದರು.

# ಪ್ಲೆಸಿಸ್ ಅರ್ಧಶತಕ:
ಈ ನಡುವೆ ಟೆಸ್ಟ್ ಜೀವನದಲ್ಲಿ ತಮ್ಮ 20ನೆ ಅರ್ಧಶತಕವನ್ನು ದಾಖಲಿಸಿದ ನಾಯಕ ಡುಪ್ಲೆಪಿಸಿಸ್, ಸ್ಪಿನ್ನರ್ ಅಶ್ವಿನ್ ಬೌಲಿಂಗ್‍ನಲ್ಲಿ ಭಾರಿ ಹೊಡೆತಕ್ಕೆ ಕೈ ಹಾಕಿ ಚೇತೇಶ್ವರಪೂಜಾರ್‍ಗೆ ಕ್ಯಾಚಿ ನೀಡಿ ಹೊರ ನೀಡಿದರು.
ಪ್ಲೆಸಿಸ್ ಔಟಾಗುವುದಕ್ಕೂ ಮುನ್ನ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 55 ರನ್ ಗಳಿಸಿದ್ದಲ್ಲದೆ, 5 ವಿಕೆಟ್‍ಗೆ 115 ರನ್‍ಗಳ ಜೊತೆಯಾಟ ನೀಡಿದರು.

ನಾಯಕ ಔಟಾದ ನಂತರ ಕ್ರಿಸ್‍ಗಿಳಿದ ಸ್ಫೋಟಕ ಆಟಗಾರ ಕ್ಲಿಂಟನ್ ಡಿ-ಕಾಕ್ ಆರಂಭದಲ್ಲೇ ಬೌಂಡರಿ ಬಾರಿಸುವ ಮೂಲಕ ದೊಡ್ಡ ಇನ್ನಿಂಗ್ಸ್ ಕಟ್ಟುವ ಭರವಸೆ ನೀಡಿದ್ದರೆ, ಎಲ್ಗರ್ ತಾಳ್ಮೆಯುತ ಆಟಕ್ಕೆ ಮುಂದಾಗಿದ್ದರು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ದಕ್ಷಿಣ ಆಫ್ರಿಕಾ 72 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿದ್ದು ಎಲ್ಗರ್ ( 114 ರನ್, 12 ಬೌಂಡರಿ, 4 ಸಿಕ್ಸರ್) ಹಾಗೂ ಡಿ ಕಾಕ್(34 ರನ್, 5 ಬೌಂಡರಿ, 1 ಸಿಕ್ಸರ್) ಕ್ರಿಸ್‍ನಲ್ಲಿದ್ದರು.

Facebook Comments