ಎಲ್ಲಂದರಲ್ಲಿ ದಿಢೀರನೇ ನಿಲ್ಲುವ ನಮ್ಮ ಮೆಟ್ರೋ : ಪ್ರಯಾಣಿಕರು ಕಂಗಾಲು

ಈ ಸುದ್ದಿಯನ್ನು ಶೇರ್ ಮಾಡಿ

Namma-Metro

ಬೆಂಗಳೂರು, ಆ.13- ಸಿಟಿ ರೈಲು ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಮೆಟ್ರೋ ರೈಲು ದಿಢೀರ್ ಸಂಚಾರ ಸ್ಥಗಿತಗೊಳ್ಳುತ್ತಿರುವುದು ಮಾಮೂ ಲಾಗಿ ಹೋಗಿದೆ. ಬೈಯ್ಯಪ್ಪನಹಳ್ಳಿಯಿಂದ ಆಗಮಿಸಿದ ಮೆಟ್ರೋ ರೈಲು ಸಿಟಿ ರೈಲು ನಿಲ್ದಾಣ ಬಿಟ್ಟು ಮಾಗಡಿರಸ್ತೆಗೆ ಸಾಗುವ ವೇಳೆ ಇಂದೂ ಕೂಡ ದಿಢೀರ್ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಕೆಲ ಕಾಲ ಆತಂಕಗೊಂಡರು.  ವಿಜಯನಗರದತ್ತ ತೆರಳುತ್ತಿದ್ದ ಮೆಟ್ರೋರೈಲನ್ನು ತುರ್ತು ನಿಲುಗಡೆ ಮಾಡುವಂತೆ ಬೈಯ್ಯಪ್ಪನಹಳ್ಳಿ ಮಾಸ್ಟರ್ ಕಂಟ್ರೋಲ್ ರೂಂನಿಂದ ಮಾಹಿತಿ ಬಂದ ಕೂಡಲೇ ಮೆಟ್ರೋ ಸಂಚಾರ ಸ್ತಬ್ಧಗೊಳ್ಳುತ್ತದೆ.

ರೈಲು ಸಂಚಾರದ ಸಮಯದಲ್ಲಿ ಟ್ರ್ಯಾಕ್‍ನಲ್ಲಿ ತಾಂತ್ರಿಕ ದೋಷ ಕಂಡುಬಂದಲ್ಲಿ ಮಾತ್ರ ಈ ರೀತಿ ದಿಢೀರ್ ಸಂಚಾರ ರದ್ದುಗೊಳಿಸಲಾಗುವುದು. ಕಳೆದ ಮೂರ್ನಾಲ್ಕು ದಿನಗಳಿಂದ ನಾಯಂಡಹಳ್ಳಿ -ಬೈಯ್ಯಪ್ಪನಹಳ್ಳಿ ಮಾರ್ಗದ ನಡುವೆ ಪದೇ ಪದೇ ರೈಲು ಸಂಚಾರ ಸ್ಥಗಿತಗೊಳ್ಳುತ್ತಿರುವುದು ಮಾಮೂಲಾಗಿ ಹೋಗಿದೆ.  ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಿಎಂಆರ್‍ಸಿಎಲ್ ನಿರ್ದೇಶಕ ವಸಂತರಾವ್ ಅವರು, ಇದೊಂದು ರೈಲು ಕಾರ್ಯಾಚರಣೆಯಲ್ಲಿ ಮಾಮೂಲು. ರೈಲ್ವೆ ಮಾರ್ಗದಲ್ಲಿ ಯಾವುದೇ ತಾಂತ್ರಿಕ ದೋಷವಿಲ್ಲ. ಹೀಗಾಗಿ ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin