ಎಲ್ಲರಿಗೂ ಬೂಸ್ಟರ್ ಲಸಿಕೆ ನೀಡುವ ಅವಶ್ಯಕತೆ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಸೆ.18-ಎರಡು ಡೋಸ್ ಕೊರೊನಾ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ನೀಡಲು ಮುಂದಾಗಿದ್ದ ಆಮೆರಿಕಾ ನಿರ್ಧಾರಕ್ಕೆ ತಜ್ಞರ ಸಮಿತಿ ಅಪಸ್ವರ ವ್ಯಕ್ತಪಡಿಸಿದೆ. ಫೈಜರ್ ಸಂಸ್ಥೆಯ ಬೂಸ್ಟರ್ ಡೋಸ್ ಅನ್ನು ಎಲ್ಲರಿಗೂ ನೀಡುವ ಬದಲು ಇನ್ನಿತರ ಹಲವಾರು ರೋಗಗಳಿಂದ ಬಳಲುತ್ತಿರುವ 65 ವರ್ಷ ಮೇಲ್ಪಟ್ಟ ಹಿರಿಯರಿಗೆ ಮಾತ್ರ ನೀಡುವುದು ಸೂಕ್ತ ಎಂದು ತಜ್ಞರ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ.

ಅಮೆರಿಕಾದಲ್ಲಿ ಡೆಲ್ಟಾ ರೂಪಾಂತರಿ ಸೋಂಕು ಹೆಚ್ಚಳಗೊಳ್ಳುತ್ತಿರುವುದನ್ನು ಮನಗಂಡು ಒಂದು ತಿಂಗಳ ಹಿಂದೆ ಬೈಡೆನ್ ಅಡಳಿತ ಎರಡು ಡೋಸ್ ಪಡೆದ ಎಲ್ಲರಿಗೂ ಬೂಸ್ಟರ್ ಲಸಿಕೆ ನೀಡಲಾಗುವುದು ಎಂದು ಹೇಳಿಕೆ ನೀಡಿತ್ತು. ಇದೀಗ ತಜ್ಞರ ಸಮಿತಿ ಬೂಸ್ಟರ್ ಲಸಿಕೆ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿರುವುದು ಶ್ವೇತಭವನ ನಿರ್ಧಾರಕ್ಕೆ ಹಿನ್ನಡೆಯದಂತಾಗಿದೆ.

ಎಲ್ಲರಿಗೂ ಬೂಸ್ಟರ್ ಲಸಿಕೆ ನೀಡಬೇಕೆ ಎಂಬ ಬಗ್ಗೆ ವರದಿ ನೀಡಿರುವ ತಜ್ಞರ ಸಮಿತಿಯ 16 ಮಂದಿ ಅವಶ್ಯಕತೆ ಇಲ್ಲ ಎಂದಿದ್ದಾರೆ, ಕೇವಲ ಇಬ್ಬರು ಮಾತ್ರ ಬೂಸ್ಟರ್ ನೀಡಬಹುದು ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.

Facebook Comments