ಎಲ್ಲಾ ಇವಿಎಂಗಳಿಗೂ ವಿವಿಪಿಎಟಿ ಅಳವಡಿಸಲು ಮುಂದಾದ ರಾಜ್ಯ ಚುನಾವಣಾ ಆಯೋಗ

ಈ ಸುದ್ದಿಯನ್ನು ಶೇರ್ ಮಾಡಿ

VVPat--01

ಬೆಂಗಳೂರು,ಡಿ.25-ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಚುನಾವಣೆಯನ್ನು ಆರೋಪ ಮುಕ್ತವಾಗಿ ನಡೆಸಲು ಎಲ್ಲಾ ಇವಿಎಂಗಳಿಗೂ ವಿವಿಪಿಎಟಿ (ವೋಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರಯಲ್) ಅಳವಡಿಕೆ ಮಾಡಲು ಮುಂದಾಗಿದೆ.   ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಕಂಡ ನಂತರ ಇವಿಎಂ ಮಷೀನ್ ಬಗ್ಗೆ ಕಾಂಗ್ರೆಸ್ ನಾಯಕರ ಅನುಮಾನ ಹೆಚ್ಚಾಗಿದೆ. ಮತಪತ್ರದ ಮೂಲಕ ಚುನಾವಣೆ ನಡೆಸಲು ಕಾಂಗ್ರೆಸ್ ಒತ್ತಾಯಿಸಿದೆ. ಆದರೆ, ಚುನಾವಣೆ ಆಯೋಗ ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದಿದೆ. ಇವಿಎಂ ಸರಿ ಇಲ್ಲ ಎಂಬ ಆಪಾದನೆಯಿಂದ ಮುಕ್ತಿ ಹೊಂದಲು ವಿಧಾನಸಭೆ ಚುನಾವಣೆಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಸೂಕ್ಷ್ಮ ಭದ್ರತೆಯಲ್ಲಿ ಮಾಡಲು ನಿರ್ಧರಿಸಿದೆ. ಇವಿಎಂ ಹ್ಯಾಕ್ ಆರೋಪ ಮುಕ್ತ ಮಾಡಲು ಎಲ್ಲಾ 224 ಕ್ಷೇತ್ರಗಳಲ್ಲಿ ವಿವಿಪಿಎಟಿ ಅಳವಡಿಕೆಗೆ ನಿರ್ಧಾರ ಮಾಡಿದೆ.

ಸುಪ್ರೀಂ, ಹೈಕೋರ್ಟ್‍ಗಳಲ್ಲೂ ಇವಿಎಂಗೆ ಜಯ : 

ಸಿಕ್ಕ ಸಿಕ್ಕಕಡೆ ವಿಪಕ್ಷಗಳು ಇವಿಎಂ ಸರಿಇಲ್ಲ ಅಂತಿದ್ದಾರೆ. ಆದರೆ ಇವಿಎಂ ಹ್ಯಾಕ್ ಮಾಡೋಕೆ ಸಾಧ್ಯವಿಲ್ಲ ಅಂತಿದೆ. ಈಗಾಗಲೇ ಇವಿಎಂ ವಿರುದ್ಧ ಸವಾಲ್ ಹಾಕಿರೋರು ಸೋತಿದ್ದು, ಇಷ್ಟು ಮಾತ್ರವಲ್ಲ ಹೀಗೆ ಇವಿಎಂ ಸರಿ ಇಲ್ಲ ಅಂತ ನಡೆದ ಅನೇಕ ಕಾನೂನು ಸಮರಗಳಲ್ಲೂ ಇವಿಎಂಗಳಿಗೇ ಜಯ ಸಿಕ್ಕಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಹಣ ಬಿಡಗಡೆಗೆ ಮನವಿ ; 

ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಮುಗಿದಿದ್ದು, ಈಗ ಕರ್ನಾಟಕದಲ್ಲಿ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬರೋಬ್ಬರಿ 320 ಕೋಟಿ ರೂ. ವೆಚ್ಚವಾಗಲಿದೆ. ಹೀಗಾಗಿ ಆದಷ್ಟು ಶೀಘ್ರವಾಗಿ ಹಣ ಬಿಡುಗಡೆ ಮಾಡುವಂತೆ ರಾಜ್ಯ ಚುನಾವಣಾ ಆಯುಕ್ತರು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಬಾರಿ ಮತಗಟ್ಟೆಗಳಲ್ಲಿ ವಿವಿಪಿಎಟಿ ಅಳವಡಿಸಿದ ಇವಿಎಂ ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮತಗಟ್ಟೆಗಳ ಸಂಖ್ಯೆಯೂ ಹೆಚ್ಚಾಗಲಿದ್ದು, ಹಣದುಬ್ಬರ, ಬೆಲೆ ಏರಿಕೆಯಿಂದ ಖರ್ಚು ಹೆಚ್ಚಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ. ಹಿಂದಿನ ಬಾರಿ ಚುನಾವಣೆಗೆ ಸುಮಾರು 54,261 ಮತಗಟ್ಟೆಗಳು ಇದ್ದವು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸುಮಾರು 57,000 ಮತಗಟ್ಟೆಗಳು ಇರಲಿವೆ. ಇನ್ನು ಮತದಾರರ ಸಂಖ್ಯೆಯೂ 4.9 ಕೋಟಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ವಿವಿ ಪ್ಯಾಟ್ ಎಂದರೇನು?:
ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರನ್ನು ಬೂತ್ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗೆ ಚೀಟಿಯನ್ನು ಹಾಕಬೇಕಾಗುತ್ತದೆ.  ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.

Facebook Comments

Sri Raghav

Admin