ಎಲ್ಲಾ ಗ್ರಾಮಗಳನ್ನು ಸರಾಯಿ ಅಕ್ರಮ ದಂಧೆ ಮುಕ್ತ ಮಾಡುವೆ

ಈ ಸುದ್ದಿಯನ್ನು ಶೇರ್ ಮಾಡಿ

12

ನರೇಗಲ್ಲ,ಫೆ.6- ಇದು ನನ್ನ ತವರು ಪಟ್ಟಣ, ಇಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಅದಕ್ಕಾಗಿ ನನ್ನ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳನ್ನು ಸರಾಯಿ ಮತ್ತು ಅಕ್ರಮ ದಂಧೆ ಮುಕ್ತ ಮಾಡುವೆ ಎಂದು ಪಿಎಸ್‍ಐ ಬಿ.ಎಚ್. ಕಿಲ್ಲೆದಾರ ತಿಳಿಸಿದರು. ಶ್ರೀ ಹುಚ್ಚೀರೇಶ್ವರ ಜಾತ್ರೆಯ ಅಂಗವಾಗಿ ನಿನ್ನೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಸರ್ವಧರ್ಮದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾನು ಊರಿಗೆ ಹಳಬನಾದರು ಠಾಣೆಯ ಸೇವೆಗೆ ಹೊಸಬನಾಗಿದ್ದೆನೆ. ನಮ್ಮೂರಿನಲ್ಲಿ ನಡೆಯುತ್ತಿರುವ ಜಾತ್ರೆಗೆ ರಾಜ್ಯಾದ್ಯಂತ ಭಕ್ತರ ಡಂಡೆ ಹರಿದು ಬರುವ ನೀರಿಕ್ಷೆ ಇದೆ. ಆಚರಣೆಯ ವೇಳೆ ಶಾಂತಿ, ಸೌಹಾರ್ದತೆ ಕಾಪಾಡುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ.

ಪಟ್ಟಣದಲ್ಲಿ ಇರುವ ಎಲ್ಲ ಗುರು ಹಿರಿಯರು, ಸಂಘಟಣೆಗಳ ಕಾರ್ಯಕರ್ತರು, ಸುತ್ತಮುತ್ತಲಿನ ಗ್ರಾಮದ ಭಕ್ತರು, ವಿದ್ಯಾರ್ಥಿಗಳು, ಸ್ವಯಂ ಸೇವಕರು ಎಲ್ಲರು ಸೇವಾ ಮನೋಭಾವನೆಯಿಂದ ದುಡಿಯೋಣ ನಮ್ಮೂರಿನ ಜಾತ್ರೆಯನ್ನು ಯಾವುದೇ ಅಹಿತಕರ ಘಟಣೆಗಳು ನಡೆಯದಂತೆ ನೋಡಿಕೊಳ್ಳೊಣ ಎಂದರು.ಪಟ್ಟಣದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಸರಾಯಿ ದಂಧೆ ಜೋರಾಗಿ ನಡೆಯುತ್ತಿರುವುದರ ಕುರಿತು ಗ್ರಾಮದ ಹಿರಿಯರಿಂದ ಮಾಹಿತಿ ಬಂದಿದ್ದು ಒಂದು ವರ್ಷದ ಒಳಗಾಗಿ ನಮ್ಮ ಠಾಣೆಗೆ ಒಳಪಡುವ ಎಲ್ಲ ಅಕ್ರಮ ಚಟುವಟಿಕೆಗಳ ತಾಣಕ್ಕೆ ಸಿಬ್ಬಂದಿ ಜೊತೆ ಖುದ್ದಾಗಿ ದಾಳಿ ನಡೆಸಿ ತಡೆಯುತ್ತೇನೆ. ಇದಕ್ಕೆ ಗ್ರಾಮಸ್ಥರ ಸಹಕಾರ ತುಂಬಾ ಮುಖ್ಯ. ಸಮಸ್ಯೆಗಳು ಏನೆ ಇದ್ದರೂ ನೇರವಾಗಿ ಠಾಣೆಗೆ ಬನ್ನಿ, ಅದಕ್ಕೆ ಸ್ಪಂಧಿಸಿ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ.

ಆದ್ದರಿಂದ ಇದು ಜನರಿಂದ ಜನರ ಸೇವೆಗಾಗಿ ಇರುವ ಜನಸ್ನೇಹಿ ಠಾಣೆ ಎಂದು ತಾವುಗಳೆಲ್ಲರು ಭಾವಿಸಬೇಕು ಎಂದರು. ನಂತರ ಮಾತನಾಡಿದ ಶಿಕ್ಷಕ ಎನ್.ಎಸ್. ದಡೆಸೂರಮಠ ಅವರು ಠಾಣೆ ಮತ್ತು ಜನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾಣ್ಯ ಸಾಮಾಜಿಕವಾಗಿ ಚಲಾವಣೆಯಾಗಬೇಕು ಎಂದರೆ, ಸಹಕಾರ ಬಹಳ ಮುಖ್ಯ. ಠಾಣೆಯ ಅಧಿಕಾರಿಗಳು ಜನರೊಂದಿಗೆ ಬೆರೆತು ನಡೆದರೆ ಒಳಿತು ಎಂದರು. ನಿವೃತ್ತ ಸೇನಾಧಿಕಾರಿ ರಾಮಣ್ಣ ಸಕ್ರೋಜಿ ಮಾತನಾಡಿ ನಮ್ಮೂರು ಸರ್ವಧರ್ಮದ ಶಾಂತಿಯ ಬಿಡು. ಇತಿಹಾಸ ಪುಟ ತೆರೆದಾಗ ಇಲ್ಲಿ ಕಾಣುವುದು ಮಹಾನ್ ತಪಸ್ವಿಗಳ ಪುಟ, ನಾಡು ನುಡಿಗಾಗಿ ಹೋರಾಟ ಮಾಡಿದವರು ಜೀವನ ಚರಿತ್ರೆಗಳು ಮಾತ್ರ. ಜನರೊಂದಿಗೆ ಇಂತಹ ಶಾಂತಿಯ ಧಾರ್ಮದಲ್ಲಿ ಅಧಿಕಾರಿಗಳು ಜನರೊಂದಿಗೆ ಹೊಂದಾಣಿಕೆ ಇಲ್ಲದ ಕಾರಣ ಸ್ವಲ್ಪ ದಿನಗಳಿಂದ ಇಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ ಅದನ್ನು ನೂತನ ಪಿಎಸ್‍ಐ ಸಾಹೇಬರು ಆದಷ್ಟು ಬೇಗನೆ ಸರಿಪಡಿಸಿ ಮತ್ತೆ ಯಥಾ ಸ್ಥಿತಿ ತರುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

ತಾಲೂಕ ಪಂಚಾಯಿತ ಸದಸ್ಯ ಅಂದಾನಪ್ಪ ದೊಡ್ಡಮೇಟಿ, ಈಶ್ವರ ಬೇಟಗೇರಿ, ಶರಣು ಗೋಗೇರಿ, ಸಿ.ಎಮ್. ಸಿಸ್ತಗಾರ, ಪ್ರಕಾಶ ವಾಲಿ ಇತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಎಪಿಎಮ್‍ಸಿ ಸದಸ್ಯ ನಿಂಗನಗೌಡ್ರ ಲಕ್ಕನಗೌಡ್ರ, ವೀರಣ್ಣ ಪಿಡಗೊಂಡ, ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಮುಳಗುಂದ, ಮಂಜುನಾಥ ಬಂಡಿವಡ್ಡರ, ಹನುಮಂತ, ವಿ.ಡಿ ಪಾಟೀಲ, ಮಂಜುನಾಥ ಮುಳಗುಂದ, ಶಿವನಗೌಡ, ಪಪಂ ಸದಸ್ಯರು, ಗ್ರಾಪಂ ಸದಸ್ಯರು, ತಾಪಂ ಸದಸ್ಯರು, ಪಟ್ಟಣದ ಹಿರಿಯರು, ಸಂಘಟಣೆಗಳ ಮುಖ್ಯಸ್ಥರು ಸೇರಿದಂತೆ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin