ಎಲ್ಲಾ ಬಿಗ್ ಬಜಾರ್‍ಗಳಲ್ಲಿ ಡೆಬಿಟ್/ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಈಗಲೂ 2000 ರೂ. ತೆಗೆದುಕೊಳ್ಳಬಹುದು

ಈ ಸುದ್ದಿಯನ್ನು ಶೇರ್ ಮಾಡಿ

Bigg-bazar

ಬೆಂಗಳೂರು,ಡಿ.25- ನೋಟು ಬಂದ್‍ನಿಂದ ನಗದು ಹಣದಿಂದಾಗುವ ತೊಂದರೆಗಳಿಂದಾಗಿ ಬಿಗ್ ಬಜಾರ್ ನಾಗಕರಿಗೆ ತಮ್ಮ ಎಲ್ಲ ಸ್ಟೋರ್ಸ್ ಮತ್ತು ಎಲ್ಲ ಎಫ್‍ಬಿಬಿ ಸ್ಟೋರ್ಸ್‍ಗಳಲ್ಲಿ ಅವರವರ ಡೆಬಿಟ್/ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ತಮ್ಮ ಬ್ಯಾಂಕ್ ಖಾತೆಯಿಂದ 2000ರವರೆಗೆ ಹಣ ತೆಗೆದಯುವ ಸೇವೆ ಒದಗಿಸುತ್ತಿದೆ.   ಈ ಸೌಲಭ್ಯವು ಈಗ ದೇಶದಲ್ಲಿಯೆ 213ಕ್ಕಿಂತಲೂ ಹೆಚ್ಚಿನ ಪಟ್ಟಣ ಮತ್ತು ಊರುಗಳಲ್ಲಿ 258 ಬಿಗ್ ಬಜಾರ್ ಮತ್ತು ಎಫ್‍ಬಿಬಿ ಸ್ಪೋಟ್ರ್ಸ್‍ಗಳಲ್ಲಿ ಲಭ್ಯವಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗದು ಹಣದಿಂದ ಪಿಒಎಸ್ ಯಂತ್ರದ ಮೂಲಕ ಈ ಸೌಲಭ್ಯವನ್ನು ಒದಗಿಸಿ ಬಿಗ್ ಬಜಾರಿಗೆ ಸಹಾಯ ಮಾಡಿದೆ. ಯಾವುದೇ ಶೆಡ್ಯೂಲ್ಡ್ ಬ್ಯಾಂಕ್‍ನ ತಮ್ಮ ಖಾತೆಯಲ್ಲಿಯ ಮೊತ್ತವನ್ನು ಗ್ರಾಹಕರು ಇಲ್ಲಿಂದ ತೆಗೆಯಬಹುದಾಗಿದೆ.  ನಾಲ್ಕು ಸರಳ ವಿಧಾನಗಳ ಮೂಲಕ ಗ್ರಾಹಕರು ನಗದು ಹಣವನ್ನು ತೆಗೆಯಬಹುದಾಗಿದೆ. ಸ್ಟೋರ್ಸ್‍ಗಳಲ್ಲಿಯ ವಿಶೇಷ ಕ್ಯಾಶ್ ಕೌಂಟರ್‍ಗಳಿಗೆ ಭೇಟಿ ಕೊಟ್ಟು ತಮ್ಮ ಡೆಬಿಟ್/ಎಟಿಎಂ ಕಾರ್ಡ್‍ಗಳನ್ನು ಸ್ವೈಪ್ ಮಾಡಬೇಕು. ತಮ್ಮ ಖಾತೆಯಿಂದ 2000 ರೂ. ತೆಗೆಯಬಹುದೆಂದು ಪ್ರಕಟಣೆ ತಿಳಿಸಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin