ಎಲ್ಲಾ ಶಾಲೆಗಳಲ್ಲೂ ನಾಡಗೀತೆ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

Prayer-School--0141

ಬೆಂಗಳೂರು, ಜು.14- ಸಿಬಿಎಸ್‍ಸಿ, ಐಸಿಎಸ್‍ಸಿಇ, ಖಾಸಗಿ ಅನುದಾನ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ನಾಡಗೀತೆಯನ್ನು ವಿದ್ಯಾರ್ಥಿಗಳು ಹಾಡಲೇಬೇಕು.  ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದ್ದು, ನಾಡಗೀತೆ ಹಾಡದಿರುವ ಶಾಲೆಗಳಿಗೆ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಿದೆ.  ಸದ್ಯಕ್ಕೆ ರಾಜ್ಯ ಸರ್ಕಾರ ರಾಷ್ಟ್ರಕವಿ ಹಾಗೂ ಕರ್ನಾಟಕಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಸಋಷಿ ಕುವೆಂಪು ರಚಿತ ಜಯ ಭಾರತ ಜನನಿಯತ ತನುಜಾತೆ, ಜಯಹೇ ಕರ್ನಾಟಕ ಮಾತೆ….. ಎಂಬುದನ್ನು ನಾಡಗೀತೆಯನ್ನಾಗಿ ಘೋಷಣೆ ಮಾಡಿದೆ.

ಈ ಪ್ರಕಾರ ಬೆಳಗ್ಗೆ ಶಾಲೆ ಪ್ರಾರಂಭವಾಗುವ ಮುನ್ನ ರಾಷ್ಟ್ರಗೀತೆ ಹಾಡುವುದಕ್ಕೂ ಮುನ್ನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಹಾಡಬೇಕೆಂಬ ನಿಯಮವನ್ನು ರೂಪಿಸಿತ್ತು.  ಆದರೆ, ಸರ್ಕಾರಿ ಶಾಲೆಗಳಲ್ಲಿ ಮಾತ್ರ ವಿದ್ಯಾರ್ಥಿಗಳು ರಾಷ್ಟ್ರಗೀತೆಯ ಜತೆಗೆ ನಾಡ ಗೀತೆಯನ್ನು ಹಾಡುತ್ತಿದ್ದರು. ಆದರೆ, ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ನಾಡಗೀತೆ ಹಾಡಲು ಮೂಗು ಮುರಿಯುತ್ತಿದ್ದರು.  ಪದೇ ಪದೇ ಸರ್ಕಾರ ನಾಡಗೀತೆ ಹಾಡದಿರುವ ಶಾಲೆಗಳಿಗೆ ಎಚ್ಚರಿಕೆ ನೀಡಿದರೂ ಇದಕ್ಕೆ ಕ್ಯಾರೆ ಎಂದಿರಲಿಲ್ಲ. ಇದೀಗ ಇಂತಹ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಸರ್ಕಾರ ನಾಡಗೀತೆ ಹಾಡದಿರುವ ಶಾಲೆಗಳಿಗೆ ದಂಡವಿಧಿಸಲು ತೀರ್ಮಾನಿಸಿದೆ.

ಯಾವ ಶಾಲೆಗಳಲ್ಲಿ ನಾಡ ಗೀತೆ ಹಾಡುವುದಿಲ್ಲವೋ ಅಂತಹ ಶಾಲೆಗಳಿಗೆ ಅನುದಾನ ಕಡಿತ ಸೇರಿದಂತೆ ಕಾನೂನಿನಡಿ ನೀಡಬಹುದಾದ ಎಲ್ಲಾ ಶಿಕ್ಷೆಗಳನ್ನು ವಿಧಿಸಲು ಮುಂದಾಗಿದೆ.
ಈಗಾಗಲೇ ಆಧಿಸೂಚನೆ ಸಿದ್ಧವಾಗಿದ್ದು, ತಿಂಗಳಾಂತ್ಯಕ್ಕೆ ಅಧಿಕೃತವಾಗಿ ಹೊರ ಬೀಳಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin