ಎಲ್ಲಾ ಸೌಲಭ್ಯಗಳನ್ನು ಸೊಸೆಗೆ ನೀಡಲಾಗಿದೆ, ನಮಗೇನೂ ನೀಡಿಲ್ಲ : ಕಲ್ಲಪ್ಪ ಹಂಡಿಭಾಗ್ ತಂದೆ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

Kallapa

ಚಿಕ್ಕಮಗಳೂರು, ಡಿ.25-ತಮ್ಮ ಮಗ ಕಲ್ಲಪ್ಪ ಹಂಡಿಭಾಗ್ ಸತ್ತ ಮೇಲೆ ಎಲ್ಲಾ ರೀತಿಯ ಸೌಲಭ್ಯ ಮತ್ತು ಸಹಾಯಧನ ಸೊಸೆಗೆ ನೀಡಲಾಗಿದೆ. ನಮಗೇನೂ ನೀಡಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ತಂದೆ-ತಾಯಿ ಮಾಧ್ಯಮದ ಮುಂದೆ ಅಲವತ್ತುಕೊಂಡಿದ್ದಾರೆ.   ಹಂಡಿಭಾಗ್ ಅವರು ಕರ್ತವ್ಯನಿರತ ಸಂದರ್ಭದಲ್ಲಿ ಎಲ್‍ಐಸಿ ಜೀವ ವಿಮೆ ಮಾಡಿದ್ದರು. ಇದಕ್ಕೆ ಸಹಿ ಹಾಕಲೆಂದು ಚಿಕ್ಕಮಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿ, ಸೊಸೆಗೆ ಸರ್ಕಾರಿ ಕೆಲಸ, ಪಿಂಚಣಿ, ಕೆಜಿಐಡಿ ಲೋನ್ ಸೇರಿದಂತೆ ಸರ್ಕಾರದ ಎಲ್ಲಾ ಸವಲತ್ತನ್ನು ನೀಡಲಾಗಿದೆ. ಅದರ ಅಲ್ಪ ಪಾಲು ನಮಗೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಮನೆಯಲ್ಲಿ ಬೆಳೆದು ನಿಂತಿರುವ ಮಗಳಿದ್ದಾಳೆ. ಒಬ್ಬ ಮಗನಿದ್ದಾನೆ. ಅವರುಗಳ ಜವಾಬ್ದಾರಿ ಹಾಗೂ ಜೀವನ ನಿರ್ವಹಣೆ ಕಷ್ಟವಾಗಿದೆ. ಕಲ್ಲಪ್ಪ ಬದುಕಿದ್ದರೆ ನಮಗೆ ಈ ತೊಂದರೆ ಎದುರಾಗುತ್ತಿರಲಿಲ್ಲ. ಹಾಗಾಗಿ ಸರ್ಕಾರದಿಂದ ನಮಗೂ ಸಹಾಯಹಸ್ತ ಚಾಚಬೇಕೆಂದು ಮನವಿ ಮಾಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin