ಎಲ್ಲಿಯವರೆಗೆ ಹೋರಾಟ-ಗೆಲ್ಲುವವರೆಗೆ ಹೋರಾಟ : ಸೋಂದಾ ಸ್ವರ್ಣವಲ್ಲಿ ಶ್ರೀಗಳ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

10

ಶಿರಸಿ,ಮಾ,15- ಒಂದು ಪ್ರದೇಶದಲ್ಲಿ ನೂರಾರು ವರ್ಷದಿಂದ ಜೀವನ ಕಟ್ಟಿಕೊಂಡು ಬಂದಿರುವ ಸಾವಿರಾರು ಜನರ ಸಮಾದಿಮೇಲೆ ಕಟ್ಟುವಂತಹ ಇಂತಹ ಯೋಜನೆಗಳನ್ನು ಮೊಳಕೆಯಲ್ಲೆ ಚಿವುಟದಿದ್ದರೆ ಮುಂದೆ ದೊಡ್ಡ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಾಹಾಸ್ವಾಮಿಗಳು ಎಚ್ಚರಿಸಿದ್ದಾರೆ.ನಿನ್ನೆ ಯೋಗ ಮಂದಿರದಲ್ಲಿ ಗಣೇಶಪಾಲ್ ಕಿರು ಜಲವಿದ್ಯುತ್ ಯೋಜನೆ ವಿರೋಧಿಸಿ ಸಂಘಟಿತ ಶಾಲ್ಮಲಾ ಕಣಿವೆ ಸಂರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ವಿರೋಧಿ ಹೋರಾಟದ ಪೂರ್ವ ಬಾವಿ ಸಭೆಯನ್ನುದ್ದೆಶಿಸಿ ಅವರು ಮಾತನಾಡಿದರು. ಕೋಟ್ಯಾಂತರ ಬೆಲೆ ಬಾಳುವ ಅತ್ಯಮೂಲ್ಯ ಅರಣ್ಯವನ್ನು ಹಾಳು ಮಾಡಿ ಒಂದು ಪ್ರದೇಶದ ಸಂಸ್ಕೃತಿ ಯನ್ನೆ ನಾಶ ಮಾಡುವಂತಹ ಇಂತಹ ಯೋಜನೆಗಳಿಗೆ ಅವಕಾಶವನ್ನು ಯಾವುದೆ ಕಾರಣಕ್ಕು ನಾವು ಕೊಡಬಾರದು. ನಮ್ಮ ಹೋರಾಟ ಎಲ್ಲಿಯವರೆಗೆ ಇರಬೇಕೆಂದರೆ ಗೆಲ್ಲುವವರೆಗೂ ನಿಲ್ಲಬಾರದು, ಆದರೆ ನಮ್ಮ ಹೋರಾಟವು ಸಂಘಟಿತವಾಗಿರಬೇಕು ಮತ್ತು ಕಾನೂನಾತ್ಮಕ ವಾಗಿರಬೇಕು ಎಂದರು. ಈ ಹೋರಾಟವು ಸಂಕುಚಿತಗೊಳ್ಳದೆ, ಜನಾಂದೋಲನವಾಗಬೇಕು.

ಪಕ್ಷಾತೀತ ಮತ್ತು ಜತ್ಯಾತೀತವಾಗಿ, ಮಾನವ ಸಂಸ್ಕೃತಿಯ ಉಳಿವಿನ ಹೋರಾಟವಾಗಬೇಕು ಎಂದು ಕರೆ ಕೊಟ್ಟರು. ಶಾಲ್ಮಲಾ ಕಣಿವೆ ಸಂರಕ್ಷಣಾ ಸಮಿತಿ ಅದ್ಯಕ್ಷ ವಿ.ಆರ್. ಹೆಗಡೆ ಮಾತನಾಡಿ ಜಿಲ್ಲೆಯಲ್ಲಿ ಈ ಹಿಂದೆ ಅನೇಕ ಜಲವಿದ್ಯುತ್ ಸ್ಥಾಪನೆ ಕುರಿತು ಪ್ರಸ್ತಾವನೆ ಆಗಿ ಅವುಗಳೆಲ್ಲಾ ರದ್ದಾಗಿ ಈ ಗಣೇಶಪಾಲ ಯೋಜನೆ ಮಾತ್ರ ಉಳಿದುಕೊಂಡಿದೆ, ಆದರೆ ಇಂತಹ ಮಾರಕ ಯೋಜನೆಗಳ ಅನುಷ್ಟಾನಕ್ಕೆ ಯಾವುದೆ ಕಾರಣಕ್ಕು ಬಿಡುವುದಿಲ್ಲಾ ಎಂದರು. ಇದೆ ಪ್ರದೇಶದಲ್ಲಿಯೆ ಸೌರವಿದ್ಯುತ್ ಘಟಕವನ್ನು ಸ್ಥಾಪಿಸಲು ಜಿಲ್ಲಾ ಪಂಚಾಯತಿ ಸಭೆಯಲ್ಲಿ ಈಗಾಗಲೆ ಚರ್ಚಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳಿಸಿದ್ದೇವೆ. ಈ ಪ್ರದೇಶದಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತಿ ಸಾಮಾನ್ಯ ಸಬೆಯಲ್ಲಿ ಈ ಯೋಜನೆಯ ವಿರೋದಿ ಠರಾವು ಮಾಡಿ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಜಿಪಂ ಸದಸ್ಯ ಜಿ.ಎನ್. ಹೆಗಡೆ ಹೇಳಿದರು. ನಂತರ ಸಬೆಯಲ್ಲಿ ಸೇರಿದ್ದ 200ಕ್ಕು ಹೆಚ್ಚು ಜನರು ಸೇರಿ ಡಿವೈಎಸ್ಪಿ ಕಛೇರಿಗೆ ತೆರಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

 

Facebook Comments

Sri Raghav

Admin