ಎಲ್ಲೆಡೆ ಕ್ರಿಸ್‍ಮಸ್ ಸಡಗರ, ಭರ್ಜರಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Chritsmass-1

ಕ್ರಿಸ್‍ಮಸ್ ಸಡಗರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಉದ್ಯಾನನಗರಿಯ ಪ್ರಮುಖ ಚರ್ಚ್‍ಗಳು ಮತ್ತು ಮನೆಗಳು ಮದುವಣಗಿತ್ತಿಯಂತೆ ರಂಗು ರಂಗಾಗಿ ಸಿಂಗಾರಗೊಳ್ಳುತ್ತಿವೆ. ನಗರದ ಪ್ರಮುಖ ಚರ್ಚ್‍ಗಳು, ಮನೆಗಳಲ್ಲಿ ಮನ ಸೆಳೆಯುವ ಅಲಂಕಾರ, ಗೊಂಬೆಗಳ ಜೋಡಣೆ, ಗೋಂದಳಿ ತಯಾರಿ (ಕ್ರಿಬ್) ಎಲ್ಲವೂ ಭರದಿಂದ ಸಾಗಿದೆ.   ಕ್ರೈಸ್ತ ಬಾಂಧವರಿಗೆ ಪವಿತ್ರ ಹಬ್ಬವಾಗಿರುವ ಕ್ರಿಸ್‍ಮಸ್ ಅನ್ನು ಏಸು ಕ್ರಿಸ್ತನ ಜನ್ಮೋತ್ಸವದ ನೆನಪಿನಲ್ಲಿ ಸಡಗರದಿಂದ ಆಚರಿಸುತ್ತಾರೆ. ಏಸು ಕ್ರಿಸ್ತ ಕೊಟ್ಟಿಗೆಯಲ್ಲಿ ಅವತರಿಸಿದ ನಂಬಿಕೆ ಹಲವು ಕಾಲದಿಂದಲೂ ಕ್ರೈಸ್ತ ಬಾಂಧವರಲ್ಲಿ ಇದೆ. ಹಾಗಾಗಿ ಎಲ್ಲಾ ಚರ್ಚ್‍ಗಳಲ್ಲಿ, ಮನೆಗಳಲ್ಲಿ ಕ್ರಿಬ್ ತಯಾರಿಸಲಾಗುತ್ತಿದೆ.

Chritsmass-2

ಇದು ಪ್ರಮುಖ ಆಕರ್ಷಣೆ ಎಂದರೆ ತಪ್ಪಾಗಲಾರದು. ಇದರ ವೀಕ್ಷಣೆಗೆ ಕ್ರೈಸ್ತ ಬಾಂಧವರಲ್ಲದೆ ಎಲ್ಲಾ ಸಮುದಾಯದವರು ಚರ್ಚ್‍ಗಳಿಗೆ ಆಗಮಿಸುತ್ತಾರೆ. ನಾಳೆ ಮಧ್ಯರಾತ್ರಿಯಿಂದ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ. 25ರಂದು ಬೆಳಗ್ಗೆ ಚರ್ಚ್‍ಗಳಲ್ಲಿ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಾರೆ.  ಒಟ್ಟಾರೆ ಕ್ರಿಸ್‍ಮಸ್‍ನಿಂದ ಜನವರಿ 1ನೆ ತಾರೀಖಿನ ಹೊಸ ವರ್ಷದವರೆಗೂ ಕ್ರಿಸ್ತರ ಮನೆ -ಮನೆಗಳಲ್ಲಿ ಹಬ್ಬದ ಸಂಭ್ರಮ ಕಳೆ ಕಟ್ಟುತ್ತದೆ. ಜ.8ರಂದು ಮೂರು ರಾಯರ ಹಬ್ಬದ ದಿನ ಕೊನೆಯಾಗುತ್ತದೆ. ಅಂದು ಗೋಂದಲಿಯನ್ನು ತೆರವುಗೊಳಿಸಲಾಗುವುದು. ಕ್ರಿಸ್ ಮಸ್ ಹಬ್ಬಕ್ಕೆ ಎಷ್ಟೇ ದೊಡ್ಡ ಚರ್ಚ್‍ಗಳಾದರೂ ಅಲ್ಲಿ ಕೇಕ್ ಹೊರತು ಬೇರ್ಯಾವುದೇ ಸಿಹಿ ನೀಡುವುದಿಲ್ಲ. ಫ್ಲೇವರ್ ಮಾತ್ರ ಬೇರೆಯಾಗಿರುತ್ತದೆ.

Chritsmass-7

ಕೆಲವರು ಮನೆಯಲ್ಲೇ ತಯಾರಿಸಿದ ಕೇಕ್‍ಗಳನ್ನು ವಿತರಿಸುತ್ತಾರೆ. ಇನ್ನು ಸಾಂತಾ ಕ್ಲಾಸ್ ವೇಷಧಾರಿಗಳು ಸಾರ್ವಜನಿಕರಿಗೆ ಕೇಕ್ ಅನ್ನು ವಿತರಿಸಿ ಮಕ್ಕಳು ಸಂತಸಕ್ಕೆ ಕಾರಣರಾಗುತ್ತಾರೆ.   ಹಬ್ಬದ ಹಿನ್ನೆಲೆಯಲ್ಲಿ ನಗರದ ಮಳಿಗೆಗಳಲ್ಲಿ ಖರೀದಿ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಕ್ರಿಸ್‍ಮಸ್ ಟ್ರೀ, ನಕ್ಷತ್ರಗಳು, ಸಾಂತಾ ಕ್ಲಾಸ್ ವೇಷಭೂಷಣಗಳು, ಮಾರಾಟ ನಡೆಯುತ್ತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Chritsmass-6

Chritsmass-8

Chritsmass-5

Chritsmass-3

Chritsmass-4

Facebook Comments

Sri Raghav

Admin