ಎಲ್‍ಪಿಜಿ ಸಬ್ಸಿಡಿ ಸಿಲಿಂಡರ್ ಬೆಲೆಯಲ್ಲಿ 2 ರೂ. ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

LPG-Subsidy-001
ನವದೆಹಲಿ, ನ.1- ರಿಯಾಯಿತಿ ದರದ ಅಡುಗೆ ಅನಿಲ( ಎಲ್‍ಪಿಜಿ) ಬೆಲೆಯಲ್ಲಿ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್‍ಗೆ 2ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಐದು ತಿಂಗಳಲ್ಲಿ ಆರು ಬಾರಿ ದರ ಹೆಚ್ಚಾಗಿದೆ.ಹೊಸ ದರ ಏರಿಕೆಯಿಂದಾಗಿ 14.2 ಕೆಜಿ ರಿಯಾಯಿತಿ ಎಲ್‍ಪಿಜಿ ಸಿಲಿಂಡರ್ ಬೆಲೆ ಈಗ 430.64ರೂ.ಗಳಷ್ಟು ಹೆಚ್ಚಾಗಿದೆ. ಕಳೆದ ಬಾರಿ ಇದರ ಬೆಲೆ 428.59 ರಷ್ಟಿತ್ತು ಎಂದು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತಿಳಿಸಿವೆ.ಜಾಗತಿಕ ವಿದ್ಯಮಾನ ಮತ್ತು ಏರಿಳಿತಗಳಿಂದ ಈ ಏರಿಕೆ ಕಂಡುಬಂದಿದ್ದು, ವಿಮಾನಗಳಿಗೆ ಬಳಸಲಾಗುವ ಜೆಟ್ ಇಂಧನ ಬೆಲೆಯಲ್ಲೂ ತೀವ್ರ ಹೆಚ್ಚಳವಾಗಿದ್ದು, ಶೇ.7.3ರಷ್ಟು ಏರಿದೆ. ಹೀಗಾಗಿ ಏವಿಯೇಷನ್ ಟರ್ಬೈನ್ ಫ್ಯೂಯಲ್ (ಎಟಿಎಫ್) ಬೆಲೆ ಪ್ರತಿ ಕಿಲೋ ಲೀಟರ್‍ಗೆ 3,434.26 ರೂ.ಗಳಿಗೆ ಏರಿಕೆಯಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin