ಎಲ್‍ಪಿಜಿ ಸಿಲಿಂಡರ್ ಸ್ಫೋಟ : 2 ಮಕ್ಕಳು, ಮಹಿಳೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Blast

ನಾಸಿಕ್, ನ.4- ಎಲ್‍ಪಿಜಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆ ಸಾವಿಗೀಡಾಗಿ, ಇತರ ನಾಲ್ವರು ತೀವ್ರ ಗಾಯಗೊಂಡಿರುವ ದುರ್ಘಟನೆ ಮಹಾರಾಷ್ಟ್ರದ ನಾಸಿಕ್‍ನ ಪಿಂಪಲ್‍ಗಾಂವ್ ಬಸ್ವಂತ್ ಪ್ರದೇಶದ ಕೊಳಗೇರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಸ್ಫೋಟದಿಂದ ಭುಗಿಲೆದ್ದ ಬೆಂಕಿಯಿಂದಾಗಿ ಅನೇಕ ಗುಡಿಸಲುಗಳು ಭಸ್ಮವಾಗಿವೆ.
ನಾಸಿಕ್‍ನಿಂದ ಸುಮಾರು 27 ಕಿ.ಮೀ. ದೂರದಲ್ಲಿರುವ ಪಿಂಪಲ್‍ಗಾಂವ್ ಬಸ್ವಂತ್-ನಾರಾಯಣಟೆಂಬಿ ರಸ್ತೆಯಲ್ಲಿರುವ ಪವನ್‍ಸುತ್ ನಗರ ಬಾಹುಸಾಹೇಬ್ ಪವಾರ್ ಎಂಬುವರಿಗೆ ಸೇರಿದ ಕೊಳೆಗೇರಿಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಠಾಣಾಧಿಕಾರಿ ವಿ.ಆರ್.ದೇಸಾಲೆ ಹೇಳಿದ್ದಾರೆ.

ಈ ದುರಂತದಲ್ಲಿ ಮೋಹಿನಿ ಪವಾರ್(30), ಕರಣ್ ವಾಲ್ವಿ (8) ಮತ್ತು ರಾಗಿಣಿ ಶಿಂಧೆ (4) ಮೃತಪಟ್ಟಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿರುವ ಇತರ ನಾಲ್ವರಿಗೆ ನಾಸಿಕ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  ಸ್ಫೋಟದ ತೀವ್ರತೆಯಿಂದ ಬೆಂಕಿ ಕಾಣಿಸಿಕೊಂಡು ಅಕ್ಕಪಕ್ಕದ ಗುಡಿಸಲುಗಳು ಭಸ್ಮವಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin