ಎಸಿಬಿ ಬಲೆಗೆ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕ

ಈ ಸುದ್ದಿಯನ್ನು ಶೇರ್ ಮಾಡಿ

ACB--01

ಧಾರವಾಡ, ಆ.18-ಕೃಷಿಕರೊಬ್ಬರ ಜಮೀನಿಗೆ ಆರ್‍ಟಿಸಿ ಮಾಡಿಕೊಡಲು 15 ಸಾವಿರ ಲಂಚ ಹಣ ಪಡೆಯುತ್ತಿದ್ದ ಎಚ್‍ಡಿಎಂಸಿ ವಲಯ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸುರೇಶ್ ಗೊಲ್ಲರ್ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದಿದ್ದಾರೆ.ಧಾರವಾಡ ಜಿಲ್ಲೆ, ಕೆಲಗೇರಿ ಗ್ರಾಮದ ನಿವಾಸಿಯಾಗಿರುವ ಕೃಷಿಕರೊಬ್ಬರು ತಮಗೆ ಸೇರಿದ 8 ಗುಂಟೆ ಖಾಲಿ ಜಾಗದ ಆರ್‍ಟಿಸಿಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಜಮೀನಿಗೆ ಆರ್‍ಟಿಸಿ ಮಾಡಿಕೊಡಲು ಸುರೇಶ್‍ಗೊಲ್ಲರ್ 15 ಸಾವಿರ ಹಣ ನೀಡುವಂತೆ ಒತ್ತಾಯಿಸಿದ್ದರು.

ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು. ದೂರುದಾರರು ನೀಡಿದ ದೂರಿನನ್ವಯ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ ವೇಳೆ ಕೃಷಿಕನಿಂದ ಹಣ ಪಡೆಯುತ್ತಿದ್ದ ಸುರೇಶ್ ಸಿಕ್ಕಿಬಿದ್ದಿದ್ದಾರೆ.

Facebook Comments

Sri Raghav

Admin