ಎಸಿಬಿ ವತಿಯಿಂದ ಸಾರ್ವಜನಿಕ ಅರಿವು ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

madhugiri

ಮಧುಗಿರಿ, ಆ.30- ಭ್ರಷ್ಟಾಚಾರ ನಿಯಂತ್ರಣಕ್ಕೆ ಇಲಾಖೆಯ ನಿರಾಸಕ್ತಿ ಎದ್ದು ಕಾಣುತ್ತಿತ್ತು. ಇದರಿಂದಾಗಿ ಹತ್ತಾರು ದೂರುದಾರರು ಕಾದು ವಾಪಸ್ಸಾದ ಘಟನೆಯೂ ನಡೆಯಿತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಹಾಗೂ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಸಿಬಿಯ ಡಿವೈಎಸ್‍ಪಿ ಕೋದಂಡರಾಮು, ಜಿಲ್ಲೆಯಲ್ಲಿ 90 ಸಾರ್ವಜನಿಕ ದೂರಿನ ಅರ್ಜಿಗಳು ದಾಖಲಾಗಿದ್ದು, ರಾಜ್ಯದಲ್ಲಿಯೇ ಜಿಲ್ಲೆಯು ಎರಡನೆಯ ಸ್ಥಾನದಲ್ಲಿದೆ. ಈಗಾಗಲೇ 80 ಅರ್ಜಿಗಳ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನಿಂದ 4 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.  ಸಾರ್ವಜನಿಕರು ದೂರು ದಾಖಲಿಸಲು ದೂ.ಸಂ.0816-2255522, 9480806267 ಸಂಖ್ಯೆಗಳಿಗೆ ಕರೆ ಮಾಡುವಂತೆ ಮತ್ತು ನಮ್ಮ ಕಚೇರಿಗೆ ಅಂಚೆ ಮೂಲಕ ದೂರು ದಾಖಲಿಸಿದರೂ ಅವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಇದೇ ವೇಳೆ ತಿಳಿಸಿದರು.ಪಿಎಸೈ ಗುರುಪ್ರಸಾದ್, ಪ್ರಥಮ ದರ್ಜೆ ಸಹಾಯಕ ಮಲ್ಲಿಕಾರ್ಜುನ ಬಡೆನೂರು ಸಿಬ್ಬಂದಿಗಳಾದ ಬಾಲರಾಜು, ನರಸಿಂಹರಾಜು, ತಹಶೀಲ್ದಾರ್ ಅನಂತರಾಮು, ಆರ್.ಐ ಸುದರ್ಶನ್, ರಿಜ್ವಾನ್ ಪಾಷ ಹಾಗೂ ದೂರುದಾರರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin