ಎಸ್ಪಿ ಟೀಬಲ್ ಮೇಲೆ ರಾಜೀನಾಮೆ ಪತ್ರ ಇಟ್ಟು ಸಬ್‍ ಇನ್ಸ್ಪೆಕ್ಟರ್ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Kabbal-Raj

ಉಡುಪಿ,ಸೆ.22-ಸಬ್‍ ಇನ್ಸ್ಪೆಕ್ಟರ್ ರೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು ರಾಜೀನಾಮೆ ಪತ್ರ ಇಟ್ಟು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಕೋಟಾ ಪೊಲೀಸ್ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಕಬ್ಬಾಳ್‍ರಾಜ್ ರಾಜೀನಾಮೆ ನೀಡಿರುವುದನ್ನು ಎಸ್ಪಿ ಕೆ. ಟಿ. ಬಾಲಕೃಷ್ಣ ಖಚಿತಪಡಿಸಿದ್ದಾರೆ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ವೈಯಕ್ತಿಕ ಕಾರಣ ತಿಳಿಸಿ ರಾಜೀನಾಮೆ ಪತ್ರವನ್ನು ನನ್ನ ಕಚೇರಿಯಲ್ಲಿ ಇಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.  ಈ ಹಿಂದೆಯೂ ಅವರು ಇದೆ ರೀತಿ ರಾಜೀನಾಮೆ ನೀಡಿ ಹೋಗಿದ್ದರು. ನಂತರ ಅವರನ್ನು ಕರೆಸಿ ಮಾತುಕತೆ ನಡೆಸಿದ ನಂತರ ಅದನ್ನು ವಾಪಸ್ ಪಡೆದಿದ್ದರು. ಆದ್ರೆ ಪುನಃ ಇದೆ ರೀತಿ ಮಾಡಿದ್ದಾರೆ. ಈಗ ಹಿರಿಯ ಅಧಿಕಾರಿಗಳು ಅವರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಸಿಕ್ಕ ನಂತರ ಕೌನ್ಸಲಿಂಗ್ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin