ಎಸ್ಸಿ-ಎಸ್ಟಿ ಕುಂದು ಕೊರತೆ ನಿವಾರಣೆಗೆ ಬದ್ಧ

ಈ ಸುದ್ದಿಯನ್ನು ಶೇರ್ ಮಾಡಿ

kadudru

ಕಡೂರು,ಆ. 12-ಪರಿಶಿಷ್ಟ ಜಾತಿ ಮತ್ತು ವರ್ಗಗಳ ರಕ್ಷಣೆ ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸಲು ತಾಲೂಕು ಆಡಳಿತ ಬದ್ದವಾಗಿದೆ ಎಂದು ತಹಶೀಲ್ದಾರ್ ಎಂ. ಭಾಗ್ಯ ಹೇಳಿದರು.ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ರಕ್ಷಣೆ ಮತ್ತು ಯೋಗಕ್ಷೇಮ ಸಮಿತಿ ಸಭೈಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕಿನಲ್ಲಿರುವ ಪರಿಶಿಷ್ಟ ಜಾತಿ ಮತ್ತು ವರ್ಗದವರ ರಕ್ಷಣೆ, ಯೋಗಕ್ಷೇಮ ಸರ್ಕಾರದ ಸೌಲಭ್ಯಗಳ ವಿತರಣೆಯನ್ನು ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ನೀಡಲಾಗುತ್ತಿದೆ, ಮೂಲಭೂತ ಸಮಸ್ಯೆಗಳ ಬಗೆಹರಿಸಲು ತಾವು ಬದ್ಧವಾಗಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಸಂಘಟನೆಗಳ ಮುಖಂಡರು ಕಳೆದ ಒಂದು ವರ್ಷದಿಂದ ಸಭೆ ನಡೆಸಿಲ್ಲ, ದಲಿತರೆಂದರೆ ಅಧಿಕಾರಿಗಳಿಗೆ ಕೇವಲ ಎಂದು ದೂರಿದರು.ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರುದ್ರಪ್ಪ ಇನ್ನೂ ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಈ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಮಲ್ಲೇಶ್ವರ ಗ್ರಾಮದಲ್ಲಿ ಅವಶ್ಯಕತೆ ಇರುವ ಸ್ಮಶಾನವನ್ನು ಅವಶ್ಯಕತೆ ಇದ್ದು, ಸರ್ವೆ ನಂ.188 ರಲ್ಲಿ ಇದಕ್ಕೆ ಆವಕಾಶ ಮಾಡಿಕೊಡುವಂತೆ ಕಳೆದ ಸಭೆಯಲ್ಲಿ ಚರ್ಚಿಸಲಾಗಿತ್ತು, ಆದರೂ ಇದು ಕಾರ್ಯಗತವಾಗಿಲ್ಲ, ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ಶೂದ್ರ ಶ್ರೀನಿವಾಸ್ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಭಾಗ್ಯ ಅವರು ಕಂದಾಯ ಇಲಾಖೆಯು ನಿಮ್ಮ ಮನವಿಯನ್ನು ಪರಿಶೀಲಿಸಿದ್ದು, ಅದರಂತೆ ಮಲ್ಲೇಶ್ವರ ಗ್ರಾಮದಲ್ಲಿರುವ ಗೋಮಾಳ ಜಮೀನಿನ ಲಭ್ಯತೆಯನ್ನು ಆಧಾರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಕಂದಾಯ ಇಲಾಖೆಯಲ್ಲಿರುವ ಗ್ರಾಮ ಸಹಾಯಕ ಹುದ್ದೆ, ತಳವಾರ, ನೀರುಗಂಟಿ, ಕುಲುವಾಡಿಗಳ ಆಯ್ಕೆ ಸಂದರ್ಭದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಬೀರೂರು ಮಲ್ಲಿಕಾರ್ಜುನ್, ಶೂದ್ರ ಶ್ರೀನಿವಾಸ್ ಮತ್ತು ಈಶ್ವರಪ್ಪ ತಿಳಿಸಿದ ಅವರ ಈ ಹುದ್ದೆಗಳಿಗೆ ದಲಿತರಿಗೆ ಮಾತ್ರ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ತಹಶೀಲ್ದಾರ್ ಎಂ.ಭಾಗ್ಯ ಈ ಹುದ್ದೆಗಳ ಆಯ್ಕೆ ಪ್ರಕರಣ ನ್ಯಾಯಾಲಯದಲ್ಲಿ ಇದ್ದು, ಪ್ರಕರಣ ಇತ್ಯರ್ಥವಾದ ನಂತರ ನ್ಯಾಯಾಲದ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ, ಸಮಾಜ ಕಲ್ಯಾಣಅಧಿಕಾರಿ ರುದ್ರಪ್ಪ, ಕಡೂರು ಆರಕ್ಷಕ ಉಪನಿರೀಕ್ಷಕ ರಾಕೇಶ್, ಕಾರ್ಮಿಕ ಕಲ್ಯಾಣಾಧಿಕಾರಿ ಶಶಿಕಲಾ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin