ಎಸ್‍ಎಸ್‍ಎಲ್‍ಸಿ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರ

ಈ ಸುದ್ದಿಯನ್ನು ಶೇರ್ ಮಾಡಿ

6

ನರೇಗಲ್ಲ,ಫೆ.28- ಜಕ್ಕಲಿಯ ಎಸ್‍ಎಜೆಡಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರ ಈಚೆಗೆ ಜರುಗಿತು.ಸಾ.ಶಿ. ಇಲಾಖೆಯ ಕನ್ನಡ ವಿಷಯ ಪರಿವೀಕ್ಷಕ ಕೆ.ಪಿ. ಸಾಲಿಮಠ ಕಾರ್ಯಾಗಾರ ಉದ್ಘಾಟಿಸಿದರು.ಮಕ್ಕಳಿಂದಲೆ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಕ್ಕೆ ಇಲ್ಲಿನ ಸಿಬ್ಬಂದಿ ಮುಂದಾಗಿರುವುದು ಶ್ಲಾಘನೀಯ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದುವ ಕಾರ್ಯಕ್ಕೆ ಇದು ಅನುಕೂಲ. ಇಂತಹ ಪ್ರಯತ್ನಗಳು ಎಲ್ಲೆಡೆ ನಡೆಯಬೇಕು ಎಂದು ಸಾಲಿಮಠ ಅಭಿಪ್ರಾಯಪಟ್ಟರು.ಗದಗ ಜಿಲ್ಲೆಯು ಈ ಹಿಂದಿನ ಮೂರು ವರ್ಷಗಳಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಕಳಪೆ ಸಾಧನೆ ಮಾಡಿದೆ ಎಂದು ಎಲ್ಲರೂ ಹೇಳುತ್ತಾರೆ.

ಆದರೆ ನಮ್ಮ ಜಿಲ್ಲೆಯ ಫಲಿತಾಂಶವು ಗುಣಾತ್ಮಕವಾಗಿದ್ದು, ನಕಲು ರಹಿತ ಪರೀಕ್ಷಾ ವ್ಯವಸ್ಥೆಯಲ್ಲಿ ಈ ಸಾಧನೆ ಕಡಿಮೆಯೇನಲ್ಲ. ಈ ಸಾರಿ ಎಲ್ಲ ಶಾಲೆಗಳಲ್ಲಿಯೂ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಸತತವಾಗಿ ಮುಂದುವರೆದಿದ್ದು, ಜಿಲ್ಲೆಯ ಫಲಿತಾಂಶ ಆಶಾದಾಯಕವಾಗಿದ್ದು, ಉತ್ತಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದರು. ಇಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇನ್ನಷ್ಟು ಶ್ರಮ ವಹಿಸಿ ಜಿಲ್ಲೆಯ ಫಲಿತಾಂಶ ಎತ್ತರಿಸಲು ತಮ್ಮದೇ ಆದ ಕಾಣಿಕೆಯನ್ನು ನೀಡಲಿ ಎಂದು ಅವರು ಸಾಲಿಮಠ ಹಾರೈಸಿದರು.  ಮುಖ್ಯ ಶಿಕ್ಷಕ ಬಿ.ಆರ್. ಗದಗಿನ ಮಾತನಾಡಿ ಸರಕಾರ ಸರಕಾರಿ ಶಾಲಾ ಮಕ್ಕಳಿಗೆ ಇನ್ನಿಲ್ಲದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ. ಕೇವಲ ಸೌಲಭ್ಯಗಳತ್ತ ಗಮನ ಹರಿಸದೆ ವಿದ್ಯಾಭ್ಯಾಸದ ಕಡೆಗೂ ಗಮನ ಹರಿಸಿದರೆ ಉತ್ತಮ ಫಲಿತಾಂಶ ಬರಲು ಸಾಧ್ಯ. ಈ ಸಾರಿ ಖಂಡಿತ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin