ಎಸ್‍ಪಿಗೆ ಮತ್ತೊಂದು ಕಂಟಕ : ಪಕ್ಷದ ಮುಖ್ಯಸ್ಥನ ವಿರುದ್ಧ ಜಾಗೃತ ದಳ ಚಾರ್ಜ್‍ಶೀಟ್

ಈ ಸುದ್ದಿಯನ್ನು ಶೇರ್ ಮಾಡಿ

Achal--01

ಬಿಲಕ್ನೋ, ಮೇ 29-ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್‍ಪಿ) ಮತ್ತೊಂದು ಕಂಟಕ ಎದುರಾಗಿದೆ. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಚಲ್ ರಾಜ್‍ಭರ್ ವಿರುದ್ಧ ಉತ್ತರಪ್ರದೇಶದ ಜಾಗೃತ ದಳ ಚಾರ್ಜ್‍ಶೀಟ್ ಸಲ್ಲಿಸಿದೆ.   ಈ ಪ್ರಕರಣದ ಅಂತಿಮ ಆರೋಪಪಟ್ಟಿ ವರದಿಯನ್ನು ಮುಖ್ಯಮಂತ್ರಿ ಯೋಗಿ ಅದಿತ್ಯನಾಥ ಅವರಿಗೆ ಸಲ್ಲಿಸಲಾಗಿದ್ದು, ಅನುಮತಿ ದೊರೆತ ನಂತರ ಬಿಎಸ್‍ಪಿ ಮುಖ್ಯಸ್ಥನ ವಿರುದ್ಧ ಪ್ರಕರಣ ದಾಖಲಿಸಲು ಜಾಗೃತ ದಳ ಸಜ್ಜಾಗಿದೆ.ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ (2007-12) ರಾಜ್‍ಭರ್ ಅವರು 34 ಲಕ್ಷ ಆದಾಯವನ್ನು ಘೋಷಿಸಿದ್ದರು. ಅದರೆ ತನಿಖೆ ವೇಳೆ 4 ಲಕ್ಷ ರೂ.ಗಳಿಗೂ ಅಧಿಕ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿತ್ತು. ಮಾಯಾವತಿ ಸಹೋದರ ಸೇರಿದಂತೆ ಪಕ್ಷದ ಕೆಲ ಮುಖಂಡರು ಈಗಾಗಲೇ ಆದಾಯ ತೆರಿಗೆ ದಾಳಿಗೆ ಒಳಗಾಗಿ ತೆರಿಗೆ ವಂಚನೆ ಪ್ರಕರಣಗಳ ಸುಳಿಯಲ್ಲಿ ಸಿಲುಕಿರುವಾಗಲೇ ಬಿಎಸ್‍ಪಿಗೆ ಮತ್ತೊಂದು ಕಂಟಕ ಎದುರಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin