ಎಸ್‍ಸಿಒ ಶೃಂಗಸಭೆಯಲ್ಲಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Modi-China--01

ಆಸ್ಟಾನಾ(ಕಜಕ್‍ಸ್ತಾನ), ಜೂ.9-ಕಜಕ್‍ಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ(ಎಸ್‍ಸಿಒ) ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.   ವಿವಾದಾತ್ಮಕ ಚೀನಾ-ಪಾಕಿಸ್ತಾನ ಆರ್ಥಿಕ ರಾಜಪಥ (ಸಿಪಿಇಸಿ) ಹಾಗೂ ಪರಮಾಣು ಪೂರೈಕೆ ಸಮೂಹ (ಎನ್‍ಎಸ್‍ಜಿ) ಸದಸ್ಯತ್ವ ಪಡೆಯುವ ಭಾರತದ ಯತ್ನಕ್ಕೆ ಚೀನಾ ಅಡ್ಡಗಾಲು ಸೇರಿದಂತೆ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿರುವ ಸಂದರ್ಭದಲ್ಲೇ ಮೋದಿ-ಜಿನ್‍ಪಿಂಗ್ ಭೇಟಿಗೆ ಭಾರೀ ಪ್ರಾಮುಖ್ಯತೆ ಲಭಿಸಿದೆ.ಎರಡು ದಿನಗಳ ಎಸ್‍ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಮೋದಿ ನಿನ್ನೆ ಕಜಕ್ ರಾಜಧಾನಿ ಅಸ್ಟಾನಾಗೆ ಆಗಮಿಸಿದ್ದಾರೆ. ಇಂದು ಪ್ರಧಾನಿ ಮತ್ತು ಚೀನಾ ಅಧ್ಯಕ್ಷರು ಪರಸ್ಪರ ಭೇಟಿಯಾಗಿ ಚರ್ಚೆ ನಡೆಸಿದರು. ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಇವರ ಭೇಟಿ ಮಹತ್ವದ್ದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ.

ನಿನ್ನೆ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಭೇಟಿಯಾಗಿ ಪರಸ್ಪರ ಅಭಿನಂದನೆ ವಿನಿಮಯ ಮಾಡಿಕೊಂಡರು. ಆಸ್ಟಾನಾ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ನಿಲುವಿಗೆ ಮಾನ್ಯತೆ ದೊರೆಯಲಿದೆ. ಅಲ್ಲದೇ ಮಧ್ಯ ಏಷ್ಯಾದ ಪ್ರಮುಖ ಅನಿಲ ಮತ್ತು ತೈಲ ನಿಕ್ಷೇಪ ಯೋಜನೆಗಳಿಗೆ ಭಾರತಕ್ಕೂ ಪಾಲುದಾರಿಕೆಗೆ ಅವಕಾಶ ಲಭಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin