ಎಸ್.ಎಂ.ಕೃ ಬಿಜೆಪಿಗೆ ಬಂದಿದ್ದು ಸಂತೋಷ ತಂದಿದೆ : ಕುಮಾರ್‍ ಬಂಗಾರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Kumar-Bangarapp

ಬೆಂಗಳೂರು, ಮಾ.25– ನಮ್ಮ ತಂದೆ ಸಮಾನಾರಾದ ಎಸ್.ಎಂ.ಕೃಷ್ಣ ಅವರು ಬಿಜೆಪಿಗೆ ಬಂದಿದ್ದು ಸಂತೋಷ ತಂದಿದೆ ಎಂದು ಮಾಜಿ ಸಚಿವ ಕುಮಾರ್‍ಬಂಗಾರಪ್ಪ ಹೇಳಿದರು. ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ್ದ ಕುಮಾರ್ ಬಂಗಾರಪ್ಪ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.  ಎಸ್.ಎಂ.ಕೃಷ್ಣ ಅವರ ರಾಜಕಾರಣವನ್ನು ನೋಡಿಕೊಂಡು ಮುನ್ನಡೆಯುವ ಅವಕಾಶ ನನಗೆ ಮತ್ತೆ ಸಿಕ್ಕಿದೆ. ನಾನು ಅವರ ಸಂಪುಟದಲ್ಲಿ ಸಚಿವನಾಗಿದ್ದೆ ಎಂದು ಸ್ಮರಿಸಿದರು. ಇಂದು ಮತ್ತೊಮ್ಮೆ ಅವರ ಭಾವಚಿತ್ರವನ್ನು ಇಟ್ಟುಕೊಂಡು ಚುನಾವಣೆಗೆ ಹೊರಟಿದ್ದೇವೆ. ಈ ಬಾರಿಯ ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ನಾನು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಮುಂದೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಪ್ರಚಾರ ಕಾರ್ಯದಲ್ಲೂ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು. ನಿನ್ನೆಯಷ್ಟೇ ದೆಹಲಿಯಿಂದ ಹಿಂದಿರುಗಿರುವ ಎಸ್.ಎಂ.ಕೃಷ್ಣ ಅವರ ಮನೆಗೆ ಇಂದು ಬೆಳಗ್ಗೆ ಕುಮಾರ್ ಬಂಗಾರಪ್ಪ, ಬಿ.ಎನ್.ಬಚ್ಚೇಗೌಡ ಭೇಟಿ ನೀಡಿ ಬಿಜೆಪಿಗೆ ಸೇರ್ಪಡೆಯಾದ ಅವರಿಗೆ ಶುಭ ಕೋರಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin