ಎಸ್.ಎಸ್.ಸಿಯಲ್ಲಿ 1330 ಸಬ್ ಇನ್ಸ್’ಫೆಕ್ಟರ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

SSC
ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್.ಎಸ್.ಸಿ) ನಿಂದ ದೆಹಲಿ ಪೊಲೀಸ್ ಇಲಾಖೆಯ ಸಬ್ ಇನ್ಸ್’ಫೆಕ್ಟರ್ (ಎಸ್.ಐ), ಸಿಐಎಸ್,ಎಫ್‍ನ ಸಿಎಪಿಎಫ್’ಎಸ್, ಅಸಿಸ್ಟೆಂಟ್ ಸಬ್ ಇನ್ಸ್’ಫೆಕ್ಟರ್ (ಎಎಸ್’ಐ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 1330
ಹುದ್ದೆಗಳ ವಿವರ
1.ಸಬ್ ಇನ್ಸ್’ಫೆಕ್ಟರ್ (ಪುರುಷ) ದೆಹಲಿ ಪೊಲೀಸ್ ಇಲಾಖೆ – 97
2.ಸಬ್ ಇನ್ಸ್’ಫೆಕ್ಟರ್ (ಮಹಿಳೆ) ದೆಹಲಿ ಪೊಲೀಸ್ ಇಲಾಖೆ – 53
3.ಸಬ್ ಇನ್ಸ್’ಫೆಕ್ಟರ್ (ಜಿಡಿ) ಸಿಎಪಿಎಫ್’ಎಸ್ – 1180
ವಿದ್ಯಾರ್ಹತೆ : ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ : ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ. ಮಿಸಲಾತಿ ಪಡೆಯುವ ಪ.ಜಾ, ಪ.ಪಂದವರಿಗೆ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ವರ್ಗದವರಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದೆ. ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ, ಮಾಜಿ ಸೇವಾ ಉದ್ಯೊಗಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02-04-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  http://www.ssconline.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin