ಎಸ್.ಬಿ.ಐನಲ್ಲಿ ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

sbi-1

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ದಲ್ಲಿ ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 119
ಹುದ್ದೆಗಳ ವಿವರ
1.ವಿಶೇಷ ವ್ಯವಸ್ಥಾಪನಾ ಕಾರ್ಯ ನಿರ್ವಹಕರು (ರೆಗ್ಯೂಲರ್) – 35
2.ಡಿಪ್ಯೂಟಿ ಜನರಲ್ ಮ್ಯಾನೇಜರ್ (ಕಾನೂನು) (ಕರಾರು) – 01
3. ಡಿಪ್ಯೂಟಿ ಜನರಲ್ ಮ್ಯಾನೇಜರ್ (ಕಾನೂನು) (ರೆಗ್ಯೂಲರ್) – 01
4. ಡಿಪ್ಯೂಟಿ ಮ್ಯಾನೇಜರ್ (ಕಾನೂನು) (ರೆಗ್ಯೂಲರ್) – 82
ವಿದ್ಯಾರ್ಹತೆ : ಕ್ರ. ಸಂ 1ರ ಹುದ್ದೆಗೆ ಸಿಎ/ಸಿಡಬ್ಲೂಎ/ಎಸಿಎಸ್/ಎಂಬಿಎ (ಫೈನಾನ್ಸ್) / 2 ವರ್ಷದ ಪಿಜಿ ಡಿಪ್ಲೋಮಾ (ಫೈನಾನ್ಸ್), ಕ್ರ. ಸಂ 2 ರಿಂದ 4ರ ವರೆಗಿನ ಹುದ್ದೆಗೆ ಕಾನೂನು ಪದವಿ ಪಡೆದಿರಬೇಕು.
ವಯೋಮಿತಿ : ಕ್ರ. ಸಂ 1ರ ಹುದ್ದೆಗೆ 30 ರಿಂದ 40 ವರ್ಷ, ಕ್ರ. ಸಂ 2 ಮತ್ತು 3ರ ಹುದ್ದೆಗೆ 42 ರಿಂದ 52 ವರ್ಷ, ಕ್ರ. ಸಂ 4ರ ಹುದ್ದೆಗೆ 25 ರಿಂದ 35 ವರ್ಷ ವಯೋಮಿತಿಯನ್ನು ನಿಗದಿಗೊಳಿಸಲಾಗಿದೆ. ನಿಯಮಗಳ ಪ್ರಕಾರ ಮೀಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 600 ರೂ, ಪ.ಜಾ, ಪ.ಪಂ ಮತ್ತು ಪಿಡಬ್ಲೂಡಿ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-04-2018

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ https://bank.sbi/careers  ಅಥವಾ www.sbi.co.in/careers ಗೆ ಭೇಟಿ ನೀಡಿ.

ಅಧಿಸೂಚನೆ

SBI-1521469978176_CRPD_RECTRUITMENT_SCO_ENGLISH-001 SBI-1521469978176_CRPD_RECTRUITMENT_SCO_ENGLISH-002 SBI-1521469978176_CRPD_RECTRUITMENT_SCO_ENGLISH-003

Facebook Comments

Sri Raghav

Admin